ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಲು ಸುವರ್ಣಾವಕಾಶ! ಪ್ರಸ್ತುತ ಸಂಸ್ಥೆಯು ತಮ್ಮ ವಿಸ್ತಾರಗೊಳ್ಳುತ್ತಿರುವ ಯೋಜನೆಗಳಿಗೆ ಅಗತ್ಯವಿರುವ ಗ್ರಾಜ್ಯುಯೇಟ್ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ನಿಮ್ಮ ಅರ್ಹತೆ ಮತ್ತು ಆಸಕ್ತಿಯನ್ನು ವೃತ್ತಿಪರ ಅವಕಾಶವಾಗಿ ರೂಪಿಸಿಕೊಳ್ಳಿ. ಹುದ್ದೆಗಳ ಸಂಖ್ಯೆಯಿಂದ ಹಿಡಿದು, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಆಕರ್ಷಕ ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ಈ ಕೆಳಗೆ ವಿವರವಾಗಿ ನೀಡಲಾಗಿದೆ.
ಪೂರ್ಣ ಮಾಹಿತಿಗಾಗಿ ದಯವಿಟ್ಟು ಕೆಳಗಿನ ವಿವರಗಳನ್ನು ಓದಿ ಮತ್ತು ನಿಮ್ಮ ಕನಸುಗಳ ನನಸಾಗಿಸಿಕೊಳ್ಳಿ.
ಹುದ್ದೆಯ ಹೆಸರು : ಗ್ರಾಜ್ಯುಯೇಟ್ ಇಂಜಿನಿಯರ್
ಕರ್ತವ್ಯದ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು, ಕರ್ನಾಟಕದಲ್ಲಿ ಕೆಲಸವನ್ನು ನಿರ್ವಹಿಸಬೇಕು.
ಒಟ್ಟು ಖಾಲಿಯಿರುವ ಹುದ್ದೆಗಳು : 35 ಹುದ್ದೆಗಳು
ಶೈಕ್ಷಣಿಕವಾದ ಅರ್ಹತೆ : ಬಿಇ/ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಅರ್ಹತೆಯನ್ನು ಹೊಂದಿರಬೇಕು.
ವೇತನ ಶ್ರೇಣಿ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾದ ರೂ. 44,000 ವೇತನ ನೀಡಲಾಗುತ್ತದೆ.
ವಯೋಮಿತಿ : ಅಭ್ಯರ್ಥಿಯು ಗರಿಷ್ಠವಾಗಿ 35 ವರ್ಷ ವಯಸ್ಸನ್ನು ಮೀರಿರಬಾರದು.
ಆಯ್ಕೆಯ ವಿಧಾನ : GATE ಸ್ಕೋರ್ ಅರ್ಹತೆಯ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್ಲೈನ್ ನ ಮೂಲಕವಾಗಿ ಅರ್ಜಿಗಳನ್ನು ಸಲ್ಲಿಸಬೇಕು.
ಮೊದಲ ಹಂತ : ಆನ್ಲೈನ್ ನ ಮೂಲಕವಾಗಿ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅನಂತರ ಅರ್ಜಿಯನ್ನು ಸಲ್ಲಿಸಬೇಕು.
ಏರಡನೇ ಹಂತ : ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಇಲ್ಲವೇ ಈ ಕೆಳಗಡೆ ನೀಡಿರುವ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಅಪ್ಲಿಕೇಷನ್ ತೆರೆದುಕೊಳ್ಳಿ.
ಮೂರನೇ ಹಂತ : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು ಮತ್ತು ವಿಳಾಸ, ವಿದ್ಯಾರ್ಹತೆ ಹಾಗೂ ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ನಾಲ್ಕನೇ ಹಂತ : ನಂತರ ಭರ್ತಿ ಮಾಡಿದ ಅಪ್ಲಿಕೇಷನ್ ಪ್ರಿಂಟ್ ಸ್ವಯಂ ದೃಢೀಕರಿಸಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಛೇರಿಯ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೋರಿಯರ್ ನ ಮೂಲಕ ಕಳುಹಿಸಬೇಕು.
ಅರ್ಜಿಯನ್ನು ಸಲ್ಲಿಸುವ ವಿಳಾಸ : ಜನರಲ್ ಮ್ಯಾನೇಜರ್ (H.R), ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಮೂರನೇ ಮಹಡಿ, B.M.T.C ಕಾಂಪ್ಲೆಕ್ಸ್, L.H. ರೋಡ್, ಶಾಂತಿನಗರ, ಬೆಂಗಳೂರು – 560027
ಅರ್ಜಿ ಶುಲ್ಕ : ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಪ್ರಾರಂಭದ ದಿನಾಂಕ : ಏಪ್ರಿಲ್ 05, 2025
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮೇ 03, 2025
ಭರ್ತಿ ಮಾಡಿದ ಅರ್ಜಿಯನ್ನು ಕಛೇರಿಗೆ ಸಲ್ಲಿಸಲು ಇರುವ ಕೊನೆಯ ದಿನಾಂಕ : ಮೇ 07, 2025
ಅಧಿಕೃತ ಅಧಿಸೂಚನೆ | Click Here |
ಅರ್ಜಿ ಸಲ್ಲಿಸಿ | Click Here |
ಅಧಿಕೃತ ವೆಬ್ ಸೈಟ್ | Click Here |