Car Subsidy : ಕಾರ್‌ ಮತ್ತು ಆಟೋರಿಕ್ಷಾ ಖರೀದಿಸಲು ಇಲ್ಲಿ ಅರ್ಜಿಸಲ್ಲಿಸಿ..!

ಈ-ಸಾರಥಿ ಯೋಜನೆಯಡಿ ಆಟೋರಿಕ್ಷಾ ಮತ್ತು ಕಾರನ್ನು ಖರೀದಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಸಹಾಯಧನ ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲಾತಿಗಳೇನು? ಹಾಗೂ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

car subsidy

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ಅರ್ಜಿದಾರರು ಪಾಲಿಕೆ ವ್ಯಾಪ್ತಿಯಲ್ಲಿ ವಿಳಾಸವಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು.
  • ಅರ್ಜಿದಾರರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕನಿಷ್ಟ ಮೂರು ವರ್ಷ ಅಥವಾ ಅದಕ್ಕೂ ಮೇಲ್ಪಟ್ಟು ವಾಸಿಸುತ್ತಿರುವ ಬಗ್ಗೆ ದೃಡೀಕರಿಸುವ ದಾಖಲಾತಿಗಳಾದ ಆಧಾರ್ ಕಾರ್ಡ್/ಪಡಿತರ ಚೀಟಿ/ನಿವಾಸ ದೃಡೀಕರಣ ಪತ್ರವನ್ನು ಹೊಂದಿರಬೇಕು.
  • SC/ST ಅರ್ಜಿದಾರರು ಈ ಸೌಲಭ್ಯವನ್ನು ಪಡೆಯಲು ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು.
  • ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅರ್ಜಿದಾರರು ಕುಟುಂಬದ ಒಂದು ವರ್ಷದ ಆದಾಯವು ರೂ 3 ಲಕ್ಷ ಮೀರಿರಬಾರದು.
  • ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಈ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

1) ಇ-ಆಟೋ ರಿಕ್ಷಾವನ್ನು ಖರೀದಿಸಲು ಪಾಲಿಕೆಯ ವೆಚ್ಚದ ಶೇ 50% ರಷ್ಟು ಅಥವಾ ಗರಿಷ್ಟ ರೂ 80,000/- ಸಾವಿರ ಸಬ್ಸಿಡಿ ನೀಡಲಾಗುತ್ತದೆ.

2) ಕಾರನ್ನು ಖರೀದಿ ಮಾಡಲು ಶೇ 50% ಗರಿಷ್ಟ 1,50,000 ಸಬ್ಸಿಡಿಯನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

1)ಆಧಾರ್ ಕಾರ್ಡ್
2) ಪೋಟೋ
3) ಬ್ಯಾಂಕ್ ಪಾಸ್ ಬುಕ್
4) ವಾಸ ದೃಡೀಕರಣ ಪ್ರಮಾಣ ಪತ್ರ
5) ವಯಸ್ಸು ದೃಡೀಕರಣ ದಾಖಲೆ
6) ಪಡಿತರ ಚೀಟಿ
7) ಆದಾಯ ಪ್ರಮಾಣ ಪತ್ರ
8) 20/- ರೂ ಬಾಂಡ್ ಪೇಪರ್

ಅರ್ಜಿ ಸಲ್ಲಿಸುವ ವಿಧಾನ:

ಕೊನೆಯ ದಿನಾಂಕದ ಒಳಗಾಗಿ ಅಗತ್ಯ ದಾಖಲಾತಿಗಳ ಸಮೇತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(BBMP)ಸಹಾಯಕ ಕಂದಾಯ ಅಧಿಕಾರಿ(ಕಲ್ಯಾಣ) ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಸ್ವಯಂ ದೃಡೀಕರಿಸಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02/05/2025

Please wait
OPEN

Leave a Reply