ಪ್ಯಾಸೆಂಜರ್ ಆಟೋ ರಿಕ್ಷಾ ಖರೀದಿಗೆ ಸಹಾಯಧನ ಪಡೆಯಲು, ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯು ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು ಸಹಾಯಧನದ ಮೂಲಕ ನೆರವು ನೀಡುತ್ತದೆ.

ಯೋಜನೆಯ ಉದ್ದೇಶ
ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು ಸಹಾಯಧನದ ಮೂಲಕ ಪ್ರೋತ್ಸಾಹ ನೀಡುವುದು.
ಸಹಾಯಧನದ ವಿವರ
- ಪ್ಯಾಸೆಂಜರ್ ಆಟೋ ರಿಕ್ಷಾ ಖರೀದಿಗೆ ನಿಗದಿತ ಸಹಾಯಧನ: 75,000/-
- SC/ST ಅರ್ಹರಿಗೆ: ವಾಹನ ಮೌಲ್ಯದ 75% ಅಥವಾ 4,00,000/- ವರೆಗೆ.
- OBC ಮತ್ತು ಅಲ್ಪಸಂಖ್ಯಾತರಿಗೆ: ವಾಹನ ಮೌಲ್ಯದ 50% ಅಥವಾ 3,00,000/- ವರೆಗೆ.
- ಉಳಿದ ಮೊತ್ತಕ್ಕೆ ಸಾಲ ಸೌಲಭ್ಯ ಲಭ್ಯವಿದೆ.
ಅರ್ಹತಾ ಮಾನದಂಡಗಳ
- ಅರ್ಜಿದಾರರು ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
- ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
- ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಮಾನ್ಯ ಚಾಲನಾ ಪರವಾನಗಿ ಹೊಂದಿರಬೇಕು.
- ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಿಗಳಾಗಿರಬಾರದು.
- ಪೂರ್ವದಲ್ಲಿ ಈ ಯೋಜನೆಯ ಅಡಿಯಲ್ಲಿ ಯಾವುದೇ ಸೌಲಭ್ಯ ಪಡೆದಿರಬಾರದು.
- ಅರ್ಜಿದಾರರು ಬ್ಯಾಂಕ್ ಸಾಲದ ಬಾಕಿ ಪಾವತಿಯಲ್ಲಿ ವಿಳಂಬ ಮಾಡಿರಬಾರದು.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಚಾಲನಾ ಪರವಾನಗಿ
- ಬ್ಯಾಂಕ್ ಪಾಸ್ ಬುಕ್
- ವಾಹನದ ದರಪಟ್ಟಿ (quotation)
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಸ್ವಯಂ ಘೋಷಣಾ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋಗಳು (2)
ಅರ್ಜಿ ಸಲ್ಲಿಸುವ ವಿಧಾನ
- ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ Click Now
- “E-Services” ವಿಭಾಗದಲ್ಲಿ “Online Application” ಆಯ್ಕೆಮಾಡಿ.
- “Swavalambi Sarathi Scheme” ಆಯ್ಕೆಮಾಡಿ.
- ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ದೃಢೀಕರಣ ಮಾಡಿ.
- ಅರ್ಜಿದಾರರ ವಿವರಗಳು, ಆದಾಯ, ಜಾತಿ, ವಿಳಾಸ ಮತ್ತು ಇತರ ಮಾಹಿತಿಗಳನ್ನು ನಮೂದಿಸಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ವೆಬ್‌ಸೈಟ್‌ನಲ್ಲಿ “Track Status” ವಿಭಾಗದಲ್ಲಿ ಮೊಬೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಪರಿಶೀಲಿಸಬಹುದು. Click Now