ಇಲ್ಲಿದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಈ ಬಾರಿ ಪಾಸಿಂಗ್ ಮಾರ್ಕ್ಸ್ ನಿಗದಿಯಲ್ಲಿರುವ ಪ್ರಮುಖ ಬದಲಾವಣೆಗಳ ಮಾಹಿತಿ ನಿಮಗಾಗಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೊಸ ಮಾರ್ಗಸೂಚಿ ಪ್ರಕಟ! ಪಾಸಿಂಗ್ ಮಾರ್ಕ್ಸ್ 35ಕ್ಕೆ ನಿಗದಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪಾಸಿಂಗ್ ಮಾರ್ಕ್ಸ್ ಮರುನಿಗದಿ ಮಾಡಿದೆ. ಈಗ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 35 ಅಂಕಗಳನ್ನು ಪಡೆಯಬೇಕಾಗಿದೆ. 2023 ರಂತೆ ಈ ಬಾರಿ ಶೇ.20ರಷ್ಟು ಗ್ರೇಸ್ ಅಂಕಗಳ ಅವಕಾಶವಿಲ್ಲ – ಬದಲಿಗೆ ಶೇ.10ರಷ್ಟು ಮಾತ್ರ ಲಭ್ಯವಿರುತ್ತದೆ.
ಎಷ್ಟು ಗ್ರೇಸ್ ಮಾರ್ಕ್ಸ್ ಸಿಗುತ್ತೆ?
- ಈ ಬಾರಿ ಗರಿಷ್ಠ ಮೂರು ವಿಷಯಗಳಿಗೆ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗುತ್ತದೆ.
- ಕೆಲವೇ ಅಂಕಗಳಿಂದ ಫೇಲ್ ಆಗುವ ವಿದ್ಯಾರ್ಥಿಗಳಿಗೆ ಇದು ಬಂಪರ್ ಗುಡ್‌ನ್ಯೂಸ್ ಆಗಲಿದೆ.
- ಕಳೆದ ಬಾರಿಗೆ ನೀಡಲಾಗುತ್ತಿದ್ದ ಶೇ.20ರಷ್ಟು ಗ್ರೇಸ್ ಮಾರ್ಕ್ಸ್ ಪದ್ದತಿ ಈ ಸಲ ತೆಗೆದು ಹಾಕಲಾಗಿದೆ.
ಅಂಕಗಳ ವಿನ್ಯಾಸ ಹೇಗಿದೆ?
- ಪ್ರಥಮ ಭಾಷೆಯಲ್ಲಿ: ಕನಿಷ್ಠ 35 ಅಂಕ ಬೇಕು.
- ಇತರೆ ವಿಷಯಗಳಲ್ಲಿ: ಲಿಖಿತ ಪರೀಕ್ಷೆಯಲ್ಲಿ 28 ಅಂಕ, ಜೊತೆಗೆ ಆಂತರಿಕ ಮೌಲ್ಯಮಾಪನ ಅಂಕ ಸೇರಿ ಒಟ್ಟು 35 ಅಂಕ ಬಂದರೆ ಪಾಸ್.
- ಒಟ್ಟಾರೆ 219 ಅಂಕಗಳು ಬಂದರೆ, ಮತ್ತು ವಿದ್ಯಾರ್ಥಿ ಮೂರು ವಿಷಯಗಳಲ್ಲಿ ಫೇಲ್ ಆಗಿದ್ದರೂ, ಗ್ರೇಸ್ ಅಂಕಗಳಿಂದ ಪಾಸ್ ಆಗಲು ಅವಕಾಶ ಇದೆ.
ಈ App ನ ಮೂಲಕ ನಿಮ್ಮ ಪಲಿತಾಂಶವನ್ನು ಎಲ್ಲರಿಗಿಂತ ಮೊದಲು ತಿಳಿಯಲು.
ವಿಶೇಷ ಮಾಹಿತಿ:
- ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು.
- ರಾಜ್ಯದ 15,881 ಶಾಲೆಗಳ ವಿದ್ಯಾರ್ಥಿಗಳು, 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.
ಈ ನಿಯಮಗಳಿಂದ ಪರೀಕ್ಷೆ ಫಲಿತಾಂಶದ ಪ್ರಮಾಣಿಕತೆ ಹೆಚ್ಚಿಸುವ ಉದ್ದೇಶವಿದೆ. ವಿದ್ಯಾರ್ಥಿಗಳು ಈ ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆ ನಡೆಸಬೇಕು.
SSLC Result App