Application Details ISB

ಸ್ವಂತ ಉದ್ಯಮ ಆರಂಭಿಸಲು ಬಯಸುವ ಪರಿಶಿಷ್ಟ ಜಾತಿ ಸಮುದಾಯದ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಮಹತ್ವದ ಅವಕಾಶ ದೊರೆತಿದೆ. ‘ಉದ್ಯಮಶೀಲತಾ ಅಭಿವೃದ್ಧಿ ಯೋಜನೆ’ (ISB Scheme) ಅಡಿಯಲ್ಲಿ ಗರಿಷ್ಠ ₹2 ಲಕ್ಷ ಸಹಾಯಧನವನ್ನು ನೀಡಲಾಗುತ್ತಿದೆ.

Application Details ISB

ಯೋಜನೆಯ ಮುಖ್ಯ ಅಂಶಗಳು:

ಫಲಾನುಭವಿಗಳು – ಪರಿಶಿಷ್ಟ ಜಾತಿ ಸಮುದಾಯದ ನಿರುದ್ಯೋಗ ಯುವಕರು ಮತ್ತು ಯುವತಿಯರು
ಉದ್ದೇಶ – ವ್ಯಾಪಾರ ಹಾಗೂ ಸಣ್ಣಮಟ್ಟದ ಉದ್ಯಮ ಪ್ರಾರಂಭಿಸಲು ಪ್ರೋತ್ಸಾಹಿಸುವುದು
ಸಹಾಯಧನ – ಘಟಕದ ಒಟ್ಟು ವೆಚ್ಚದ 70% ಅಥವಾ ಗರಿಷ್ಠ ₹2 ಲಕ್ಷ (ಎದ್ದರಲ್ಲಿ ಕಡಿಮೆ ಇರುವ ಮೊತ್ತ)
ಬ್ಯಾಂಕ್ ಸಹಭಾಗಿತ್ವ – ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಲು ಸಹಾಯ

ಅರ್ಜಿ ಸಲ್ಲಿಸುವ ವಿಧಾನ:

📌 ಕೊನೆಯ ದಿನಾಂಕ: ಸೆಪ್ಟೆಂಬರ್ 10, 2025

👉 ಆನ್‌ಲೈನ್: ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
👉 ಆಫ್‌ಲೈನ್: ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರವನ್ನು ಸಂಪರ್ಕಿಸಬಹುದು.

ಸರ್ಕಾರದಿಂದ ನಿರುದ್ಯೋಗ ಯುವಕ ಯುವತಿಯರಿಗೆ 2 ಲಕ್ಷ ಪಡೆಯಲು

ಯೋಜನೆಯ ಮಹತ್ವ:

ಈ ಯೋಜನೆ ಯುವಜನರನ್ನು ಸ್ವಾವಲಂಬಿ ಉದ್ಯಮಿಗಳನ್ನಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ. ಸರ್ಕಾರಿ ಉದ್ಯೋಗ ಅಥವಾ ಖಾಸಗಿ ಉದ್ಯೋಗಕ್ಕೆ ಸೀಮಿತವಾಗದೆ, ತಾವು ಸ್ವಂತವಾಗಿ ಉದ್ಯಮ ಆರಂಭಿಸಲು ಬಯಸುವವರಿಗೆ ಇದು ಆರ್ಥಿಕ ಬೆಂಬಲ ಒದಗಿಸುತ್ತದೆ. ಸಹಾಯಧನ ಮತ್ತು ಬ್ಯಾಂಕ್ ಸಾಲದ ಸೌಲಭ್ಯದಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಇದು ಉತ್ತಮ ಅವಕಾಶ.

2 Lakhs For Unemployed Youth Application

ಸಮಾಜ ಕಲ್ಯಾಣ ಇಲಾಖೆಯ ಆಶಯವೆಂದರೆ, ಅರ್ಹ ಯುವಕರು ಈ ಯೋಜನೆಯ ಸದುಪಯೋಗ ಪಡೆದು ತಮ್ಮ ಭವಿಷ್ಯವನ್ನು ಸ್ವಯಂ ನಿರ್ಮಿಸಿಕೊಳ್ಳಬೇಕು.

Leave a Reply