ಹೊಸ ಪಡಿತರ ಚೀಟಿ: ಸಚಿವ ಕೆ.ಎಚ್ ಮುನಿಯಪ್ಪ ಮಹತ್ವದ ಸುದ್ದಿಘೋಷ್ಠಿ

ಹಲೋ ಸ್ನೇಹಿತರೇ ಇಂದಿನ ನಮ್ಮ ಈ ಲೇಖನಕ್ಕೆ ಸ್ವಾಗರ ಪಡಿತರ ಚೀಟಿ ಪಡೆದುಕೊಳ್ಳಲು ಕಳೆದ ಎರಡು ವರ್ಷಗಳಿಂದ ಅರ್ಜಿ ಸಲ್ಲಿಸಿದ ಅರ್ಜಿದಾರರು ಯಾವಾಗ ತಮಗೆ ಪಡಿತರ ಚೀಟಿ ಸಿಗುತ್ತದೆ ಎಂಬುದನ್ನು ಕಾದು ಕುಳಿತಿದ್ದಾರೆ. ಆದರೂ ಕೂಡ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಸಾಧ್ಯವಾಗ್ಗುತ್ತಿಲ್ಲ ಇಂತಹ ಸಂದರ್ಭದಲ್ಲಿಯೇ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ ಈ ಮಾಹಿತಿಯಿಂದ ಹೊಸ ಪಡಿತರ ಚೀಟಿ ಆಕಾಂಕ್ಷಿಗಳೆಲ್ಲ ಸಂತಸಗೊಂಡಿದ್ದಾರೆ ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ.

Application for new BPL card

ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ

ರಾಜ್ಯದಲ್ಲಿ ಈಗಾಗಲೇ ರೇಷನ್ ಕಾರ್ಡ್ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಯಾಕೆಂದರೆ ಕೇವಲ ಉಚಿತ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಮಾತ್ರವಲ್ಲದೆ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆದುಕೊಳ್ಳಲು ಕೂಡ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಪ್ರಮುಖ ದಾಖಲೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡುವರೆ ವರ್ಷಗಳ ಹಿಂದೆ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರು ತಮಗೆ ರೇಷನ್ ಕಾರ್ಡ್ ವಿತರಣೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಅರ್ಜಿ ಪರಿಶೀಲನೆ

ಸರ್ಕಾರಕ್ಕೆ ಒಟ್ಟು ಸಲ್ಲಿಕೆಯಾಗಿರುವ ಅರ್ಜಿಗಳು ಸುಮಾರು 2.96 ಲಕ್ಷದಷ್ಟು, ಇವುಗಳಲ್ಲಿ ಎಲ್ಲಾ ಅರ್ಜಿಗಳನ್ನು ಸರ್ಕಾರ ಪರಿಗಣಿಸುವುದಿಲ್ಲ.. ಹಾಗಾಗಿ ಸರಿಯಾದ ಪರಿಶೀಲನೆ ನಡೆಸಿ ನಂತರವಷ್ಟೇ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈಗಾಗಲೇ ಸುಮಾರು 75% ನಷ್ಟು ಸಲ್ಲಿಕೆಯಾದ ಅರ್ಜಿಯ ಪರಿಶೀಲನೆ ನಡೆದಿದೆ. ಈ ಪರಿಶೀಲನೆ ಪೂರ್ಣಗೊಂಡ ನಂತರ ಪಡಿತರ ಚೀಟಿ ವಿತರಣೆ ಆರಂಭವಾಗುವುದು. ಸಚಿವರು ತಿಳಿಸಿರುವ ಮಾಹಿತಿಯ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ ಹೊಸ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಆರಂಭವಾಗುವುದು.

ಇಂತವರ ಪಡಿತರ ಚೀಟಿ ರದ್ದು

ಅರ್ಹತೆ ಇರುವವರಿಗೆ ಹೊಸ ಪಡಿತರ ಚೀಟಿ ಹೇಗೆ ಸಿಗುತ್ತದೆಯೋ ಹಾಗೆಯೇ ಅನಗತ್ಯವಾಗಿ ಪಡಿತರ ಚೀಟಿ ಹೊಂದಿರುವವರ ಪಡಿತರ ಚೀಟಿಯನ್ನು ರದ್ದು ಪಡಿಸಲಾಗುತ್ತದೆ. ಎಂಬುದನ್ನು ಕೂಡ ಆಹಾರ ಇಲಾಖೆ ಸ್ಪಷ್ಟಗೊಳಿಸಿದೆ. ಸರ್ಕಾರ ತಿಳಿಸಿರುವ ಪ್ರಕಾರ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಜನ ಪಡಿತರ ಚೀಟಿ ಹೊಂದಿದ್ದರು ಕೂಡ ಅದರ ಲಾಭ ಪಡೆದುಕೊಳ್ಳುತ್ತಿಲ್ಲ ಹಾಗಾಗಿ ಅಂತಹ ಪಡಿತರ ಚೀಟಿಯನ್ನು ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ.

ಇತರೆ ವಿಷಯಗಳು:

Leave a Reply