ಹಲೋ ಸ್ನೇಹಿತರೇ ನಮ್ಮ ಇ ಲೇಖನಕ್ಕೆ ಸ್ವಾಗತ ಈಗಾಗಲೇ ರಾಜ್ಯದಲ್ಲಿ ಹಲವೆಡೆ ಭಾರಿ ಮಳೆ ಸುರಿದಿದೆ. ಇನ್ನೂ ಕೆಲವೆಡೆ ಮಳೆ ಭಾರದೆ ಬರಗಾಲ ಬಂದಿದೆ ಇದರಿಂದ ಅನೇಕ ರೀತಿಯಲ್ಲಿ ಹಾನಿಗಳಾಗಿವೆ ಹಾಗೆಯೇ ಒಂದು ಕಡೆ ರೈತರಿಗೆ ಬಹಳ ಕಷ್ಟ ಎದುರಾಗಿದೆ, ಅವರು ಬೆಳೆದ ಬೆಳೆಗಳು ಧಾರಾಕಾರ ಮಳೆಯಿಂದ ಹಾನಿಯಾಗಿವೆ. ಬೆಳೆ ನಷ್ಟದಿಂದ ಅರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದಾರೆ ಹಾಗೆ ಇನ್ನೂ ಕೆಲವು ಕಡೆ ಮಳೆ ಬಾರದೆ ಬೆಳೆಯಲ್ಲ ಒಣಗಿ ರೈತರು ಆರ್ಥಿಕ ನಷ್ಟಕ್ಕೆ ತುತ್ತಾಗಿದ್ದಾರೆ ಹಾಗಾಗಿ ಸರ್ಕಾರ ರೈತರಿಗೆ ನೆರವಾಗಲು ಅತೀ ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅರ್ಜಿಯನ್ನು ಹೊರಡಿಸಿವೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ:
ಈ ಬೆಳೆ ವಿಮೆಯು ರೈತರಿಗೆ ಬಹಳ ನೆರವಾಗಲಿದೆ. ಹೇಗೆಂದರೆ, ಅವರು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಮಾಡಿಕೊಂಡಿರುವ ರೈತರು ತಾವು ಸಲ್ಲಿಸದ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆಯೇ? ಅಥವಾ ಸಲ್ಲಿಕೆಯಾದ ಅರ್ಜಿ ಯಾವ ಹಂತದಲ್ಲಿದೆ ಎಂದು ತಮ್ಮ ಮೊಬೈಲ್ ಮೂಲಕವೇ ಕೂಡಲೇ ತಿಳಿದು ಕೊಳ್ಳಬಹುದು. ಹಾಗೆ ಬೆಳೆ ವಿಮೆ ಕಟ್ಟಿರುವ ರೈತರು ಸಂರಕ್ಷಣೆ ವೆಬ್ ಸೈಟ್ ಗೆ ಭೇಟಿ ನೀಡಿ ತಾವು ಸಲ್ಲಿಸಿದ ಅರ್ಜಿ ಕುರಿತು ಅಥವಾ ಹಣ ಸಲ್ಲಿಕೆಯಾಗುರುವ ಬಗ್ಗೆ, ಅಷ್ಟೇ ಅಲ್ಲದೆ ಇನ್ನಿತರ ಸಂಪೂರ್ಣ ಮಾಹಿತಿಯನ್ನು ತಿಳಿಯಬವುದಾಗಿದೆ.
ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ
- ಮೊದಲಿಗೆ ಈ ಕೆಳಗಿನ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ
- https://samrakshane.karnataka.gov.in/
ನಂತರ ಈ ವರ್ಷವನ್ನು ಆಯ್ಕೆ ಮಾಡಿ ‘2023-24’ ಮತ್ತು ಸೀಸನ್ ‘kharif’ ಎಂದು ಆಯ್ಕೆ ಮಾಡಿ ನಂತರ ‘ಮುಂದೆ/ Go’ ಮೇಲೆ ಕ್ಲಿಕ್ ಮಾಡಿ.
- ಇದಾದ ನಂತರದ Farmer ಕಾಲಂನಲ್ಲಿ “Check status.” ಮೇಲೆ ಕ್ಲಿಕ್ ಮಾಡಿ
- ನಂತರ ಇಲ್ಲಿ ಪ್ರೊಪೋಸಲ್ ಐಡಿ, ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆ ಹಾಕಿ, ಕೊಟ್ಟಿರುವ ಕ್ಯಾಪ್ಚ ಎಂಟರ್ ಮಾಡಿ ,ಸರ್ಚ್ ಮೇಲೆ ಕ್ಲಿಕ್ ಮಾಡಿ
- ಪುಟದಲ್ಲಿ ಅರ್ಜಿದಾರರ ಬೆಳೆ ವಿಮೆ ಅರ್ಜಿಯ ಸಂಪೂರ್ಣ ವಿವರ ತೋರಿಸುತ್ತದೆ. ಇದೇ ಪೇಜ್ ನಲ್ಲಿ “GramaOne Payment Successful Approved by Bank and Forwarded to insurance Co. “ ಎಂದು ತೋರಿಸಿದರೆ ಮಾತ್ರ ನಿಮ್ಮ ಬೆಳೆ ವಿಮಾ ಅರ್ಜಿ ಯಶ್ವವಿಯಾಗಿ ಸಲ್ಲಿಕೆ ಅಗಿದೆ ಎಂದು ಒಂದು ವೇಳೆ “ಬೆಳೆ ನೋಂದಣಿಯು ಪ್ರಗತಿಯಲ್ಲಿದೆ/Data Entry In Progress” ಎಂದು ಅಥವಾ “No date found” ಎಂದು ತೋರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ತೋರಿಸುತ್ತದೆ.
- Proposal ID ಯ ಕೊನೆಯಲ್ಲಿ ಕಾಣುವ select ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ view details ಮೇಲೆ ಕ್ಲಿಕ್ ಮಾಡಿದರೆ ಅರ್ಜಿದಾರರ ಮಾಹಿತಿ ತೋರಿಸುತ್ತದೆ ರೈತನ ಸರ್ವೆ ನಂಬರ್, ಒಟ್ಟೂ ಬೆಳೆ ವಿಮೆ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿ ದೊರೆಯುತ್ತದೆ.
ಬೆಳೆ ವಿಮೆ ಹಣ ಜಮಾ ಆಗಿರುವುದನ್ನು ನೋಡುವುದು ಹೇಗೆ :
ತಮ್ಮ ವೆಬ್ ಸೈಟ್ ನ ಮೊದಲನೇ ಪುಟದ ಕೊನೆಯಲ್ಲಿ UTR details ಎಂದು ತೋರಿಸುತ್ತದೆ ಅಲ್ಲಿ ನೀಡಿದ ಬ್ಯಾಂಕ್ ವಿವರದ ಮೇಲೆ ಕ್ಲಿಕ್ ಮಾಡಿದರೆ ಬೆಳೆ ವಿಮೆಯ ಎಷ್ಟು ಹಣ ಜಮಾ ಅಗಿದೆ ಮತ್ತು ಬ್ಯಾಂಕ್ ಖಾತೆ, ಜಮಾ ಅದ ದಿನಾಂಕದ ವಿವರವನ್ನು ಸಂಪೂರ್ಣವಾಗಿ ತೋರಿಸುತ್ತದೆ.
ಇತರೆ ವಿಷಯಗಳು
- ಯಾವ ಕಾರಣಕ್ಕೆ ಬಿ ವೈ ವಿಜಯೇಂದ್ರ ರವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಆಯ್ಕೆ: ಯಡಿಯೂರಪ್ಪನವರ ಮಗ ಸ್ಪಷ್ಟನೆ
- Gold And Silver Deepawali Festival Dhamaka: ಭಾರೀ ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿಯ ಬೆಲೆ