ಅರಣ್ಯ ಭೂಮಿ ಅಕ್ರಮ : ರಾಜ್ಯ ನಿರ್ದೇಶನ

ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ ಅಕ್ರಮವಾಗಿ ಅರಣ್ಯ ಭೂಮಿ ಹೊಂದಿದವರಿಗೆ ಇ ನಿಯಮ ಒಂದು ಪಾಠವಾಗಿದೆ ಹಾಗೆ ಯಾರೆಲ್ಲಾ ಅಕ್ರಮವಾಗಿ ಅರಣ್ಯ ಭೂಮಿಯನ್ನು ಮಾಡಿದ್ದಾರೂ ಅಂತವರಿಗೆ ಈ ಲೇಖನವು ತುಂಬಾ ಮುಖ್ಯವಾಗಿದೆ. ಇದರ ಸಂಪೂರ್ಣ ಮಾಹಿತಿಗಾಗಿ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Forest land illegal state directive

61.32 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಗೆ ಅಕ್ರಮವಾಗಿ ಮಾರ್ಪಡಿಸಿದ ಕುರಿತು ಹಾಸನದ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್ ವಿರುದ್ಧ ಮಾಡಿರುವ ಆರೋಪಗಳ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಅರಣ್ಯ ಇಲಾಖೆಗೆ ತಿಳಿಸಿದೆ.

ಈ ವಿಷಯಕ್ಕೆ ಸಂಬಂದಪಟ್ಟಂತೆ ನವೆಂಬರ್‌ 6ರಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥರಿಗೆ ಪಿಸಿಸಿಎಫ್‌ ಪತ್ರ ಬರೆದಿರುವ ಸಚಿವಾಲಯದ ಉಪ ಮಹಾನಿರೀಕ್ಷಕ ಎಂ.ಕೆ. ಶಂಭು, ‘ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಹಾಗೂ ಭೂ ಅಕ್ರಮದ ಬಗ್ಗೆ ಹಾಸನದ ಡಿಸಿಎಫ್‌ ವರದಿ ನೀಡಿದ್ದಾರೆ. ಈ ಸಂಬಂಧ ತಿಂಗಳ ಒಳಗೆ ವಾಸ್ತವಾಂಶದ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಅರಣ್ಯ ಅಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಗೆ 2022ರ ಮಾರ್ಚ್‌ 4ರಂದು ಸಚಿವಾಲಯ ಸೂಚಿಸಿತ್ತು. ಆದರೆ, ಅರಣ್ಯ ಇಲಾಖೆ ಯಾವುದೇ ವರದಿ ಸಲ್ಲಿಸಿರಲಿಲ್ಲ. ಮತ್ತೊಮ್ಮೆ ಜ್ಞಾ‍ಪನಾ ಪತ್ರವನ್ನೂ ಕಳುಹಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ..

ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದ ಈ ಪ್ರಕರಣವನ್ನು ಹಾಸನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಅರಣ್ಯ ಸಂಚಾರಿ ದಳ) ಕಾರ್ಯನಿರ್ವಹಿಸುತ್ತಿದ್ದ ಎನ್‌.ರವೀಂದ್ರ ಕುಮಾರ್ ಅವರು 2022ರ ಫೆಬ್ರುವರಿಯಲ್ಲಿ ಪತ್ತೆ ಹಚ್ಚಿದ್ದರು. ಹಾಸನದ ತ್ಯಾವಿಹಳ್ಳಿಯ ಸರ್ವೆ ನಂಬರ್ 22ರಲ್ಲಿ ಹರಡಿರುವ 61.32 ಎಕರೆ ಅರಣ್ಯ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇತರೆ ವಿಷಯಗಳು:

Leave a Reply