Income & Caste Certificate – ನಿಮ್ಮ ಜಾತಿ ಮತ್ತು ಮತ್ತು ಆದಾಯ ಪ್ರಮಾಣ ಪತ್ರವನ್ನ ಈಗ ಮೊಬೈಲ್‌ನಿಂದಲೇ 5 ನಿಮಿಷದಲ್ಲಿ ಪಡೆಯಿರಿ

ಇನ್ನು ಮುಂದೆ Income Certificate (ಆದಾಯ ಪ್ರಮಾಣಪತ್ರ) ಮತ್ತು Caste Certificate (ಜಾತಿ ಪ್ರಮಾಣಪತ್ರ) ಪಡೆಯಲು ನಾಡಕಚೇರಿಗೆ ಸುತ್ತಾಡುವ ಅಗತ್ಯವೇ ಇಲ್ಲ. ಸರ್ಕಾರದ ಅಧಿಕೃತ ನಾಡಕಚೇರಿ (Seva Sindhu / Nadakacheri) ವೆಬ್ಸೈಟ್ ಮೂಲಕ ನಿಮ್ಮ ಮೊಬೈಲ್‌ನಿಂದಲೇ 5 ನಿಮಿಷಗಳಲ್ಲಿ ಈ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

Income & Caste Certificate

ಈ ಸೇವೆ ಸಂಪೂರ್ಣವಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಲಭ್ಯವಿದ್ದು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿದೆ. ವಿಶೇಷವಾಗಿ Scholarship, Fee Concession, Government Scheme, Job Application ಇತ್ಯಾದಿಗಳಿಗೆ ಈ ಪ್ರಮಾಣಪತ್ರಗಳು ಅತ್ಯಂತ ಅಗತ್ಯವಾಗಿವೆ.

👉 ಪಡೆಯುವ ವಿಧಾನ ಹೇಗೆ?

ಮೊದಲು ನಿಮ್ಮ ಮೊಬೈಲ್‌ನಲ್ಲಿ Google ಓಪನ್ ಮಾಡಿ Nadakacheri / Seva Sindhu Karnataka ಎಂದು ಸರ್ಚ್ ಮಾಡಿ.
ಅಲ್ಲಿ ಅಧಿಕೃತ ವೆಬ್ಸೈಟ್ ಓಪನ್ ಆದ ನಂತರ Income Certificate ಅಥವಾ Caste Certificate ಆಯ್ಕೆಮಾಡಿ.

ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ.
ನಿಮ್ಮ ಮೊಬೈಲ್‌ಗೆ ಬರುವ OTP ಅನ್ನು ಎಂಟರ್ ಮಾಡಿದ ತಕ್ಷಣ, ನಿಮ್ಮ RD Number (Revenue Department Number) ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ.

RD Number ಅನ್ನು ನಮೂದಿಸಿದರೆ, ಈಗಾಗಲೇ ನಿಮ್ಮ ಹೆಸರಿನಲ್ಲಿ ಇದ್ದ Income Certificate ಅನ್ನು ತಕ್ಷಣವೇ ವೀಕ್ಷಿಸಿ Download / Print ಮಾಡಿಕೊಳ್ಳಬಹುದು.
ಅದೇ ರೀತಿ ಜಾತಿ ಪ್ರಮಾಣಪತ್ರವೂ ಲಭ್ಯವಿರುತ್ತದೆ.

✅ ಈ ಸೇವೆಯ ಲಾಭಗಳು:

  • ನಾಡಕಚೇರಿಗೆ ಹೋಗುವ ಅಗತ್ಯವಿಲ್ಲ
  • ಸಮಯ ಮತ್ತು ಹಣ ಉಳಿಯುತ್ತದೆ
  • 24×7 ಆನ್‌ಲೈನ್ ಲಭ್ಯ
  • ಸರ್ಕಾರದಿಂದ ಮಾನ್ಯ ಪ್ರಮಾಣಪತ್ರ
  • ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ

ಇಂದೇ ನಿಮ್ಮ Income ಮತ್ತು Caste Certificate ಅನ್ನು ನಿಮ್ಮ ಮೊಬೈಲ್‌ನಿಂದಲೇ ಪಡೆಯಿರಿ.
ಇದು ಸರ್ಕಾರ ನೀಡಿರುವ ಸುಲಭ ಹಾಗೂ ವೇಗದ ಡಿಜಿಟಲ್ ಸೇವೆ 👍

Leave a Reply