ಹಲೋ ಸ್ನೇಹಿತರೇ ನಮ್ಮ ಈ ಲೆಖನಕ್ಕೆ ಸ್ವಾಗತ, ಮುಕೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಜಿಯೋ Kai-OS ಆಧಾರಿತ 4G ಕೀಪ್ಯಾಡ್ ಸ್ಮಾರ್ಟ್‌ಫೋನ್ Jio Phone Prima ಅನ್ನು ಬಿಡುಗಡೆ ಮಾಡಿದೆ. ಇದು ಕೀಪ್ಯಾಡ್ ಸ್ಮಾರ್ಟ್‌ಫೋನ್‌ನ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಕಂಪನಿಯು ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ. YouTube, Facebook, WhatsApp, Google Voice Assistant ನಂತಹ ಎಲ್ಲಾ ವೈಶಿಷ್ಟ್ಯಗಳು ಈಗ Jio Phone Prima ನಲ್ಲಿ ಕೇವಲ ಒಂದು ಕ್ಲಿಕ್‌ನಲ್ಲಿ ನೋಡಬಹುದಾಗಿದೆ ಹಾಗೆ ಈ ಪೋನ್ ನ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Jio ಫೋನ್ ನ ವೈಶಿಷ್ಟತೆ
ಜಿಯೋ ತನ್ನ ಹೊಸ ಕೀಪ್ಯಾಡ್ ಸ್ಮಾರ್ಟ್‌ಫೋನ್‌ನ ನೋಟ ಮತ್ತು ವಿನ್ಯಾಸದ ಕುರಿತು ಸಾಕಷ್ಟು ಹೊಸ ಆವಿಷ್ಕಾರವನ್ನು ಸೃಷ್ಠಿ ಮಾಡಿದೆ. Jio Phone Prima ವಿನ್ಯಾಸವು ಈಗ ಸಾಕಷ್ಟು ದಪ್ಪ ಮತ್ತು ಪ್ರೀಮಿಯಂ ಆಗಿ ಕಾಣುತ್ತದೆ. 2.4 ಇಂಚಿನ ಡಿಸ್ಪ್ಲೇ ಪರದೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ 1800mAh ನ ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬರುತ್ತದೆ ಇದರಿಂದ ಹೆಚ್ಚು ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ವೀಡಿಯೋ ಕರೆ ಮತ್ತು ಫೋಟೋಗ್ರಫಿಗಾಗಿ ಮೊಬೈಲ್‌ನ ಎರಡೂ ಬದಿಯಲ್ಲಿ ಡಿಜಿಟಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಮೊಬೈಲ್ ಹಿಂಭಾಗದಲ್ಲಿ ಫ್ಲ್ಯಾಶ್ ಲೈಟ್ ಕೂಡ ಲಭ್ಯವಾಗಲಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್‌ನಂತಹ ಪ್ರೀಮಿಯಂ ಡಿಜಿಟಲ್ ಸೇವೆಗಳೊಂದಿಗೆ ಸ್ಮಾರ್ಟ್‌ಫೋನ್ ಸಜ್ಜುಗೊಂಡಿದೆ. Jio Pay ಮೂಲಕವೂ UPI ಪಾವತಿಯನ್ನು ಮಾಡಬಹುದು.
ಜಿಯೋ ಫೋನ್ ಖರೀದಿಸುವುದು ಹೇಗೆ?
ಜಿಯೋ ಪ್ರೈಮಾ 23 ಭಾಷೆಗಳಲ್ಲಿ ಬಳಕೆ ಮಾಡಬಹುದು. ತುಂಬಾ ಉತ್ತಮ ಬಣ್ಣಗಳಲ್ಲಿ ಬರುತ್ತಿರುವ ಈ ಸ್ಮಾರ್ಟ್‌ಫೋನ್ ಅನ್ನು ಪ್ರಮುಖ ರಿಟೇಲ್ ಸ್ಟೋರ್‌ಗಳು ಮತ್ತು ರಿಲಯನ್ಸ್ ಡಿಜಿಟಲ್.ಇನ್, ಜಿಯೋಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಹುದು.
ಇತರೆ ವಿಷಯಗಳು
- ದೀಪಾವಳಿ ಅದೃಷ್ಟ ಯಾರಿಗೆ: ಈ ನಾಲ್ಕು ರಾಶಿಯವರಿಗೆ ಮಾತ್ರ ಹೊಡೀತು ಜಾಕ್ ಪಾಟ್
- ದೀಪಾವಳಿ ಬಿಗ್ ಆಫರ್: ಹಬ್ಬಕ್ಕೂ ಮೊದಲೇ ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ