ಆಸ್ತಿ ಮನೆ ಖರೀದಿಗೆ ಸರ್ಕಾರದಿಂದ ಹೊಸ ನಿಯಮ: ಹಣದ ಮಿತಿ ಎಷ್ಟು

ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ನೀವು ಪ್ರಸ್ತುತ ದಿನಗಳಲ್ಲಿ ಅತವ ಮುಂದೆ ಜಮೀನು ಅಥವಾ ಮನೆ ಖರೀದಿಸಬೇಕು ಎಂದುಕೊಂಡಿದ್ದರೆ ನಾವು ಈ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಬಹಳ ಮುಖ್ಯವಾಗಿದೆ ಜಮೀನು ಅಥವಾ ಸೈಟ್ಗಳ ಮೇಲೆ ಹೂಡಿಕೆ ಮಾಡುವುದು ಪ್ರಸ್ತುತ ದಿನಮಾನದಲ್ಲಿ ಹೆಚ್ಚಿನ ಲಾಭದಾಯಕವಾಗಿದೆ. ಮ್ಯೂಚುವಲ್ ಫಂಡ್ಸ್ , ಶೇರುಗಳ ಮೇಲೆ ಹೂಡಿಕೆ, ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕಿಂತ ಭೂಮಿಯ ಮೇಲೆ, ಅಂದರೆ ಜಮೀನು ಖರೀದಿಯ ಮೇಲೆ ಹೂಡಿಕೆ ಮಾಡಿದರೆ ನೀವು ಹೆಚ್ಚಿನ ಲಾಭ ಗಳಿಸಬಹುದಾಗಿದೆ ಹಾಗೆ ಇದರ ಬೆಲೆಯು ಸಹ ಮುಂದೆ ಮುಂದೆ ಹೆಚ್ಚುತ್ತಲೇ ಹೋಗುತ್ತದೆ. ಆದರೆ ಈ ಜಮೀನು ಅಥವಾ ಮನೆ ಖರೀದಿಸುವವರಿಗೆ ಸರ್ಕಾರ ಹೊಸ ಹೊಸ ನಿಯಮವನ್ನ ಜಾರಿಗೆ ತಂದಿದೆ ಈ ಹೊಸ ನಿಯಮ ಏನು ಎಂದು ತಿಳಿಯಲು ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

New rule by Govt for property house purchase

ಕೇಂದ್ರ ಸರ್ಕಾರದಿಂದ ಹೊಸ ನಿಯಮ

ಸ್ನೇಹಿತರೇ ಆಸ್ತಿ ಖರೀದಿಯಲ್ಲಿ ಯಾವುದೇ ಸಣ್ಣ ರೀತಿಯ ತಪ್ಪಾದರೂ ನಿಮ್ಮ ಆಸ್ತಿ ನಿಮ್ಮ ಕೈತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಇತ್ತಿಚೆಗೆ ಆಸ್ತಿ ನೋಂದಣಿ ವಿಚಾರವಾಗಿ ಮೋಸ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಇನ್ನು ಆಸ್ತಿ ಖರೀದಿಸುವ ಮುನ್ನ ಅದರ ಹಣವನ್ನು ಯಾವ ರೀತಿ ವರ್ಗಾವಣೆ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಆಸ್ತಿ ವ್ಯವಹಾರದಲ್ಲಿ ನಗದು ಬಳಕೆ ಬಗ್ಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.ಆಸ್ತಿ ಕೊಂಡುಕೊಂಡ ವೇಳೆ ನಗದು ಪಾವತಿಯ ಮಿತಿಯನ್ನು ತಿಳಿದುಕೊಳ್ಳದೆ ಹೋದರೆ ಆಸ್ತಿ ಖರೀದಿ ಅಥವಾ ಮಾರಾಟಕ್ಕಿಂತ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ.

ಆಸ್ತಿ ಖರೀದಿಯಲ್ಲಿ ನಗದು ಪಾವತಿ ಎಷ್ಟು ಮಾಡಬಹುದು

ಆಸ್ತಿಯನ್ನು ಖರೀದಿ ಅಥವಾ ಮಾರಾಟ ಮಾಡುವ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಸ್ತಿ ಖರೀದಿ ವೇಳೆ ಹೆಚ್ಚಿನ ಜನರು ನಗದು ರೂಪದಲ್ಲೇ ವ್ಯವಹಾರ ಮಾಡುತ್ತಾರೆ. ಆಸ್ತಿಯ ಸಂಪೂರ್ಣ ಮೊತ್ತವನ್ನು ನಗದು ರೂಪದಲ್ಲಿ ನೀಡುವುದು ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಆಸ್ತಿ ಖರೀದಿ ವೇಳೆ ನಗದು ವ್ಯವಹಾರದ ಮಿತಿ ದಾಟಿದರೆ ಆದಾಯ ತೆರಿಗೆ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ನಗದು ಪಾವತಿ ಮಿತಿ ಎಷ್ಟು?

ನೀವು ಎಷ್ಟೇ ಆಸ್ತಿ ಖರೀದಿ ಮಾಡಿದರೂ 19,999 ರೂ. ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳುವಂತಿಲ್ಲ. ಇದಕ್ಕಾಗಿ 2015ರಲ್ಲಿ ಆದಾಯ ತೆರಿಗೆ ಕಾಯ್ದೆ269 ಎಸ್ಎಸ್, 269 ಟಿ, 271 ಡಿ, 271 ಇ ಸೆಕ್ಷನ್ಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಪೈಕಿ 269ಎಸ್ಎಸ್ನಲ್ಲಿ ಮಾಡಿದ ಬದಲಾವಣೆ ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ನೀವು ದಂಡ ಪಾವತಿ ಮಾಡಬೇಕಾಗುತ್ತದೆ. ದೇಶದಲ್ಲಿ ನಡೆಯುವ ಅಕ್ರಮ ಹಣದ ವಹಿವಾಟು ತಡೆಗಾಗಿ ಈ ಕಾಯ್ದೆಯಲ್ಲಿ ಬದಲಾವಣೆ ಮಾಡಲಾಗಿದೆ.

ಎಷ್ಟು ದಂಡ ಪಾವತಿಸಬೇಕು?

ಸೆಕ್ಷನ್ 269 ಎಸ್ಎಸ್ ಅಡಿಯಲ್ಲಿ ಒಬ್ಬ ವ್ಯಕ್ತಿಯು ಜಮೀನು, ಮನೆ ಇತರೆ ಸ್ಥಿರ ಆಸ್ತಿ ಖರೀದಿಸುವ ವೇಳೆ 2೦ ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿ ಮಾಡಿದರೆ ಆತನಿಗೆ ಶೇ.1೦೦ ರಷ್ಟು ದಂಡ ವಿಧಿಸುವ ಸಾಧ್ಯತೆ ಇದೆ. ನಗದು ವಹಿವಾಟಿನ ಸಂಪೂರ್ಣ ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಇತರೆ ವಿಷಯಗಳು

Leave a Reply