ಈ ಒಂದು ಮರ ಬೆಳೆದರೆ ಸಾಕು 65 ಲಕ್ಷ! ಕೇಳಿದರೆ ನೀವು ಕೂಡ ಶಾಖ್ ಇಲ್ಲಿದೆ ಸಂಪೂರ್ಣ ಮಾಹಿತಿ!

ಹಲೋ ಸ್ನೇಹಿತರೆ  ನೋಡಿ ಸ್ನೇಹಿತರೇ ನಮ್ಮ ರೈತರು ಹೆಚ್ಚಿನ ಆದಾಯ ಗಳಿಸಲು ತುಂಬಾ ಶ್ರಮ ಪಡುತ್ತಾರೆ ಆದರೆ ಎಷ್ಟೇ ಶ್ರಮ ಪಟ್ಟರು ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ ಆದರೆ ಈ ಮರ ಬೆಳೆದರೆ ಸಾಕು ಲಕ್ಷ ಲಕ್ಷ ಗಳಿಸಬಹುದು ಮೊದಲು ಈ ಮರಗಳನ್ನು ಎಲ್ಲರೂ ಬೆಳೆಯುವ ಹಾಗಿರಲಿಲ್ಲ ಆದರೆ ಈಗ ಯಾರು ಬೇಕಾದರು ಬೆಳೆಯಬಹುದು ಲಕ್ಷ ಲಕ್ಷ ಸಂಪಾದಿಸಬಹುದು ಇದರ ಸಂಪೂರ್ಣ ಮಾಹಿತಿ ತಿಳಿಯಬೇಕೆಂದರೆ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.   

Sandalwood crop

ಉಪಯೋಗಗಳು :

ಇದರ ದಾರುವು ಮೆದುವಾಗಿ, ದಂತದ ಬಣ್ಣದಲ್ಲಿರುವುದರಿಂದ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಶ್ರೇಷ್ಠ ಮರವೆಂದು ಪರಿಗಣಿಸಲ್ಪಟ್ಟಿದೆ.ಇದರ ಎಣ್ಣೆ ಅತ್ಯಂತ ಬೆಲೆಬಾಳುತ್ತದೆ.
ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಶ್ರೀಗಂಧವನ್ನು ವ್ಯಾಪಕವಾಗಿ ಹಲವು ರೂಪದಲ್ಲಿ ಬಳಸಲಾಗುತ್ತದೆ. ತೇಯ್ದು ಚಂದನವಾಗಿ, ಊದುಕಡ್ಡಿಗಳಲ್ಲಿ, ಚಂದನ ಮಿಶ್ರಿತ ಜಲವಾಗಿ, ನೊಸಲಿಗೆ ತಿಲಕವಾಗಿ ಪೂಜೆ ಪುನಸ್ಕಾರಗಳಲ್ಲಿ ಬಳಸಲ್ಪಡುತ್ತದೆ. ದೇವರ ಮೂರ್ತಿಗಳಿಗೆ, ಶಿವಲಿಂಗಕ್ಕೆ ಅಭಿಷೇಕದ ತರುವಾಯ ಚಂದನದ ಲೇಪವನ್ನು ಅರ್ಪಿಸುವುದು ಸಂಪ್ರದಾಯ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಸುವಾಸನೆಯುಳ್ಳ ಹಾಗೂ ಔಷಧೀಯ ಮಹತ್ತ್ವವುಳ್ಳ ಎಣ್ಣೆಯನ್ನು ಕೊಡುವ ಒಂದು ಸುಪ್ರಸಿದ್ಧ ವೃಕ್ಷ. ಶ್ರೀಗಂಧದ ಮರ ಮತ್ತು ಚಂದನದ ಮರ ಇದರ ಪರ್ಯಾಯನಾಮಗಳು. ಸ್ಯಾಂಟಲೇಸೀ ಕುಟುಂಬಕ್ಕೆ ಸೇರಿದೆ. ಸ್ಯಾಂಟಲಂ ಆಲ್ಬಂ ಇದರ ವೈಜ್ಞಾನಿಕ ಹೆಸರು. ಭಾರತದ ಮೂಲವಾಸಿಯಾದ ಇದು ಹೆಚ್ಚು ಕಡಿಮೆ ದಕ್ಷಿಣಭಾರತಕ್ಕೆ ಮಾತ್ರ ಸೀಮಿತವಾಗಿದೆ. ಸುಮಾರು 125,000 ಚದರ ಕಿಲೊ ಮೀಟರ್ ಪ್ರದೇಶದಲ್ಲಿ ಬೆಳೆಯುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹುಪಾಲು ಬೆಳೆಯಿರುವುದು (ದಕ್ಷಿಣ ಭಾರತದಲ್ಲಿನ ಒಟ್ಟು ವ್ಯಾಪ್ತಿಯಲ್ಲೆ ಸೇ. 85ರಷ್ಟು) ಮೈಸೂರು ರಾಜ್ಯದಲ್ಲಿ . ಸಮುದ್ರ ಮಟ್ಟದಿಂದ ಹಿಡಿದು ಸುಮಾರು 1200 ಮೀ. ಎತ್ತರದ ವರೆಗಿನ ಬೆಟ್ಟ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ಗಂಧದಮರ ಮೈಸೂರು ರಾಜ್ಯದ ಕೊಡಗು, ಮೈಸೂರು, ಹಾಸನ ಚಿಕ್ಕಮಗಳೂರು, ಶಿವಮೊಗ್ಗ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೇರಳವಾಗಿಯೂ ಬೆಂಗಳೂರು, ಕೋಲಾರ, ತುಮಕೂರು ಜಿಲ್ಲೆಗಳ ಕುರುಚಲು ಕಾಡುಗಳಲ್ಲಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರಿನ ಸಮೀಪದಲ್ಲಿ ಕೊಂಚಪ್ರಮಾಣದಲ್ಲೂ ಬೆಳೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲೂ ಇದನ್ನು ಕಾಣಬಹುದು. ತಮಿಳುನಾಡಿನ ಕೊಯಮತ್ತೂರು. ಸೇಲಂ ಮತ್ತು ನೀಲಗಿರಿ ಜಿಲ್ಲೆಗಳಲ್ಲೂ ಮಹಾರಾಷ್ಟ್ರ, ಆಂಧ್ರ ಮತ್ತು ಕೇರಳಗಳ ಕೆಲವು ಭಾಗಗಳಲ್ಲೂ ಇದರ ವ್ಯಾಪ್ತಿಯಿದೆ

ಇಲ್ಲಿ ಕ್ಲಿಕ್‌ ಮಾಡಿ: ರೈತರಿಗೆ ಭಂಪರ್‌ ಲಾಟರಿ

ಅತ್ಯಂತ ಸುಗಂಧಪೂರಿತ ಮರವನ್ನು ಮತ್ತು ಅತಿಮುಖ್ಯವಾದ ಸಾರತೈಲವನ್ನು (ಗಂಧದೆಣ್ಣೆ) ಕೊಡುವುದರಿಂದ ಗಂಧದ ಮರ ಬಹುಬೆಲೆಬಾಳುವ ವೃಕ್ಷವಾಗಿದ್ದು ಮೈಸೂರಿನ ರಾಜವೃಕ್ಷ ಎನಿಸಿದೆ. ಮೈಸೂರು ರಾಜ್ಯದಲ್ಲ ಎಲ್ಲಿ ಬೆಳೆದರೂ ಇದು ಸರ್ಕಾರದ ಸ್ವತ್ತೇ ಆಗಿದೆ ಮತ್ತು ಸರ್ಕಾರದ ಅನುಮತಿಯಿಲ್ಲದೆ ಇದನ್ನು ಕತ್ತರಿಸುವುದನ್ನು, ಸಾಗಿಸುವುದನ್ನು, ಕೆತ್ತನೆ ಕೆಲಸಗಳಿಗೆ ಉಪಯೋಗಿಸುವುದನ್ನು ಮತ್ತು ಇದರಿಂದ ಎಣ್ಣೆಯನ್ನು ಹೊರತೆಗೆಯುವುದನ್ನು ನಿಷೇಧಿಸಲಾಗಿದೆ.

ಸಸಿ ಬೆಳೆಸುವ ವಿಧಾನ :

ಕಬ್ಬಿಣದ ಅಂಶ ಹೆಚ್ಚಾಗಿರುವ ಗೋಡುಮಣ್ಣಿನಲ್ಲಿ ಗಂಧದ ಮರ ಚೆನ್ನಾಗಿ ಬೆಳೆಯುತ್ತದೆ. ಲ್ಯಾಟರೈಟ್ ಮಣ್ಣಿನಲ್ಲೂ ಬೆಳೆಯಬಲ್ಲದು. ನೆಲದಲ್ಲಿ ನೀರು ಚೆನ್ನಾಗಿ ಇಂಗಿಹೋಗುವಂತಿರಬೇಕು. ಬಿಸಿಲು ಚೆನ್ನಾಗಿ ಬೀಳುವಂಥ ಬೆಟ್ಟದ ಇಳಿಜಾರುಗಳು ಇದರ ಬೆಳವಣಿಗೆ ಉತ್ತಮ. ವಾರ್ಷಿಕ ಮಳೆ 510-640 ಮಿಮೀ. ಇರಬೇಕು. ಮಳೆ ಕಡಿಮೆ ಇದ್ದಷ್ಟೂ ಉತ್ತಮ. ಶುಷ್ಕವಾತಾವರಣದಲ್ಲಿ ಬೆಳೆದ ಮರದಲ್ಲಿನ ಎಣ್ಣೆಯ ಪರಿಮಾಣ ಬೇರೆಡೆ ಬೆಳೆದ ಮರಗಳಲ್ಲಿನ ಪರಿಮಾಣಕ್ಕಿಂತ ಅತಿ ಹೆಚ್ಚು. ಮಳೆಗಾಲಕ್ಕೆ ಮುಂಚೆ ಬೀಜಗಳನ್ನು ಮಡಿಗಳಲ್ಲಿ ಬಿತ್ತಿ ಸಸಿಗಳು ಹುಟ್ಟಿದ ಮೇಲೆ ಮಾರನೆಯ ವರ್ಷ ನಾಟಿ ಮಾಡಲಾಗುತ್ತದೆ. ಜೊತೆಯಲ್ಲಿ ಆಶ್ರಯದಾತ ಸಸ್ಯಗಳನ್ನು ಬೆಳೆಸಲಾಗುತ್ತದೆ. ಮರದ ಬೆಳವಣಿಗೆ ಮೊದಲ ಹಂತಗಳಲ್ಲಿ ಚೆನ್ನಾಗಿ ನೆರಳು ಬೇಕು. ಗಿಡಗಳು ಎಳೆಯವಿದ್ದಾಗ ದನಕರುಗಳಿಗೆ, ಮೇಕೆ, ಜಿಂಕೆಗಳಿಗೆ ಗಂಧದ ಎಲೆಗಳು ಅಚ್ಚುಮೆಚ್ಚಿನ ಆಹಾರ. ಎಳೆಯ ಸಸಿಗಳನ್ನು ಇಲಿ, ಮೊಲ, ಇತ್ಯಾದಿಗಳು ನಾಶಮಾಡುವುದುಂಟು. ಕಾಳ್ಗಿಚ್ಚಿಗೆ ಗಂಧದ ಮರ ಸುಲಭವಾಗಿ ಈಡಾಗುತ್ತದೆ. ಇವೆಲ್ಲ ಕಾರಣಗಳಿಂದಾಗಿ ಗಿಡಗಳು ಚಿಕ್ಕವಿದ್ದಾಗ ಹೆಚ್ಚು ಆರೈಕೆ ಮಾಡಬೇಕು.

ಔಷಧಿಗಳಲ್ಲಿ ಬಳಕೆ :

ಅತ್ಯಂತ ಶುದ್ಧರೂಪದಲ್ಲಿರುವ ಶ್ರೀಗಂಧದ ತೈಲವನ್ನು ಆಯುರ್ವೇದದ ಚಿಕಿತ್ಸೆಗಳಲ್ಲಿ ಉದ್ವೇಗ ಶಮನ ಮಾಡಲು ಉಪಯೋಗಿಸುವರು. ಶ್ರೀಗಂಧದ ತೈಲವು ಶರೀರದ ಒಳಗೆ ಮತ್ತು ಹೊರಭಾಗದಲ್ಲಿ ನಂಜು ನಿರೋಧಕವಾಗಿ ಬಳಸಲ್ಪಡುತ್ತದೆ. ಶ್ರೀಗಂಧದ ತೈಲದ ಮುಖ್ಯ ಅಂಗವಾದ ಬೀಟಾ-ಸನಟಾಲ್ ನಂಜನ್ನುಂಟುಮಾಡುವ ಸೂಕ್ಷ್ಮಜೀವಿಗಳನ್ನು ನಿರೋಧಿಸುವ ಗುಣವನ್ನು ಹೊಂದಿದೆ. ವಾಸನಾಚಿಕಿತ್ಸೆ ಮತ್ತು ಸುಗಂಧ ಸಾಬೂನುಗಳ ತಯಾರಿಕೆಯಲ್ಲಿ ಸಹ ಶ್ರೀಗಂಧವನ್ನು ಉಪಯೋಗಿಸುವರು. ಶ್ರೀಗಂಧದ ತೈಲವು ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವನ್ನು ಸಹ ಹೊಂದಿದೆ.

ಶ್ರೀಗಂಧದ ಮರದ ಬೆಲೆ

ಅತ್ಯಂತ ಶುದ್ಧರೂಪದಲ್ಲಿರುವ ಶ್ರೀಗಂಧದ ಮರವು ಅನೇಕ ರೀತಿಯಲ್ಲಿ ಇದರ ಉಪಯೋಗವು ಬಹಳ ರೀತಿಯಲ್ಲಿದೆ. ಆದರೆ ಶ್ರೀಗಂಧದ ಮರದ ಪ್ರಮಾಣ ತುಂಬಾ ಕಡಿಮೆ ಇದೆ. ಆದ್ಧರಿಂದ ಗಂಧದ ಮರಕ್ಕೆ ತುಂಬಾ ಬೆಲೆಯಿದೆ ಒಂದು ಮರಕ್ಕೆ 64 ಲಕ್ಷ ಬೆಲೆ ಬಾಳುತ್ತದೆ ಆದ್ದರಿಂದ ನೀವು ಕೂಡ ಶ್ರೀ ಗಂಧದ ಮರವನ್ನು ಬೆಳೆಯಿರಿ ಹೆಚ್ಚು ಆದಾಯವನ್ನು ಗಳಿಸಿ.

ಉದಾಹರಣೆ : ಈ ವೀಡಿಯೋ ನೋಡಿ

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಸೂಚನೆ :

ಸೇಹಿತರೇ ಶ್ರೀಗಂಧದ ಮರವನ್ನು ಎಲ್ಲರೂ ಬೆಳೆಯುವುದು ಕಾನೂನು ಬಾಹಿರ ಅಪರಾದವಾಗಿದೆ ಸರ್ಕಾರದ ಅನುಮತಿ ಮೇರೆಗೆ ಖಾತೆ ಜಾಗದಲ್ಲಿ ಗಂಧದ ಮರಗಳನ್ನು ಬೆಳೆಯಬಹುದಾಗಿದೆ. ಆದರೆ ಸರ್ಕಾರ ಅನುಮತಿ ಇಲ್ಲದೆ ಶ್ರೀ ಗಂಧದ ಮರಗಳನ್ನು ಕಡಿಯುವಂತಿಲ್ಲ ಕಡಿದರೆ ಶಿಕ್ಷೆಗೆ ಒಳಗಾಗುತ್ತೀರಿ.

ಇತರೆ ವಿಷಯಗಳು:

ಸ್ವಂತ ಉದ್ಯೋಗ, ವ್ಯಾಪಾರ , ಉದ್ಯಮ ಮಾಡಬೇಕೆನ್ನುವವರಿಗೆ ಸಿಹಿ ಸುದ್ದಿ! 20 ಲಕ್ಷದ ಈ ಯೋಜನೆ ನಿಮಗಾಗಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರ ಈ ಮಹತ್ವದ ನಿರ್ಧಾರ ಉಚಿತ ಪಡಿತರ ಸೌಲಭ್ಯ ಪಡೆಯುವವರಿಗೆ ಸಂತಸದ ಸುದ್ದಿ ವರ್ಷವಿಡೀ ಉಚಿತ ಧಾನ್ಯಗಳ ಲಾಭ

Leave a Reply