ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ನಿಮಗೆ ಸ್ವಾಗತ, ದೀಪಾವಳಿ ಹಬ್ಬಕ್ಕೆ ಬಂಪರ್ ಸಿಕ್ಕಿದೆ, ದೂರದ ಊರುಗಳಿಗೆ ಹೋಗುವವರಿಗೆ ಸಮಸ್ಯೆಯೇ ಆಗದಂತೆ ರೈಲ್ವೆ ಇಲಾಖೆ ವಿಶೇಷ ರೈಲುಗಳ ಸೇವೆಯ ಒದಗಿಸಿದೆ. ಸುಮಾರು 42 ವಿಶೇಷ ರೈಲುಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿಂದ ಹಬ್ಬಕ್ಕೆ ದೂರದ ಊರಿಗೆ ಹೋಗುವವರಿಗೆ ಸಮಸ್ಯೆ ಆಗದಂತೆ ರೈಲುಗಳ ವ್ಯವಸ್ಥೆ ಇರಲಿದೆ ಇದರ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಊರಿಗೆ ಹೋಗುವವರಿಗೆ ಶಾಕ್ ಎದುರಾಗಿದ್ದು, ಬಸ್ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದು ಬಸ್ ಪರಿಸ್ಥಿತಿಯಾದರೆ, ಇನ್ನು ರೈಲಿನಲ್ಲಿ ಹೋಗೋಣ ಅಂದರೆ ಮುಂಗಡವಾಗಿ ಬುಕ್ ಮಾಡಲು ಆಗಲ್ಲ ಅಂತಹ ಸ್ಥಿತಿ ಇದೆ. ಟಿಕೆಟ್ ಪಡೆದು ನೇರವಾಗಿ ಹೋಗೋಣ ಅಂದ್ರೆ ಅಲ್ಲೂ ಜನಜಂಗುಳಿ. ಹೀಗಾಗಿ ಲಾಂಗ್ ವೀಕೆಂಡ್ ಬಂದಾಗ ಸಾಲು ಸಾಲು ರಜೆಗಳು ಸಿಕ್ಕಾಗ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಾಯ ಪ್ರಯಾಣಿಕರದ್ದಾಗಿತ್ತು. ಇಷ್ಟಾದರೂ ಬಸ್ ಬೆಲೆ ಏರಿಕೆ ಶಾಕ್ ಜನರನ್ನು ಕಾಡುವುದು ನಿಂತಿರಲಿಲ್ಲ. ಆದರೆ ಈಗ ದೀಪಾವಳಿಗೆ ದಿಢೀರ್ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ವಿಶೇಷ ರೈಲು ಓಡಾಟದ ಬಗ್ಗೆ ಮಾಹಿತಿ ನೀಡಿರುವ ‘ಸೌತ್ ವೆಸ್ಟರ್ನ್ ರೈಲ್ವೇ’ ವಲಯ, ‘ದೀಪಾವಳಿ ಮತ್ತು ಛತ್ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೇ ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ, ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ https://enquiry.indianrail.gov.in ಗೆ ಭೇಟಿ ನೀಡಲು ಅಥವಾ 139 ಅನ್ನ ಡಯಲ್ ಮಾಡಿ’ ಎಂದು ತಿಳಿಸಲಾಗಿದೆ. ಹೀಗೆ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಇನ್ನು ರಸ್ತೆ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ರೈಲು ಪ್ರಯಾಣವೇ ಬೆಸ್ಟ್. ಇಲ್ಲಿ ದರವೂ ಕಮ್ಮಿ ಹಾಗೂ ಪ್ರಯಾಣವೂ ಸುರಕ್ಷಿತ ಎಂಬ ಮಾತು ಇದೆ. ಇದರ ಜೊತೆಗೆ ರೈಲುಗಳಲ್ಲಿ ಓಡಾಡಲು ಉತ್ತಮವಾದ ವ್ಯವಸ್ಥೆ ಕೂಡ ಇರಲಿದೆ. ಆದರೆ ಟಿಕೆಟ್ ಸಿಗುತ್ತಿಲ್ಲ ಎಂಬುದೇ ಜನರ ಚಿಂತೆಯಾಗಿತ್ತು. ಇದೀಗ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸುವ ಮೂಲಕ, ರಾಜ್ಯ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿ ನೀಡಿದೆ. ಈ ಮೂಲಕ ಕನ್ನಡಿಗರಿಗೂ ರೈಲು ಸೇವೆಯ ವಿಚಾರದಲ್ಲಿ ಸಿಹಿಸುದ್ದಿ ಸಿಕ್ಕಿದೆ. ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ https://enquiry.indianrail.gov.in ಗೆ ವಿಸಿಟ್ ನೀಡಲು ತಿಳಿಸಲಾಗಿದೆ. ಅಥವಾ 139 ಅನ್ನ ಡಯಲ್ ಮಾಡಿ ಸಂಪರ್ಕಿಸಬಹುದು.

ಇತರೆ ವಿಷಯಗಳು
- ಭಾರೀ ಮಳೆಗೆ ರೈತರಿಗೆ ಒಲಿದ ಬೆಳೆ ವಿಮೆ ಭಾಗ್ಯ: ಚೆಕ್ ಮಾಡುವುದು ಹೇಗೆ ಇಲ್ಲಿ ತಿಳಿಯಿರಿ
- ಯಾವ ಕಾರಣಕ್ಕೆ ಬಿ ವೈ ವಿಜಯೇಂದ್ರ ರವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಆಯ್ಕೆ: ಯಡಿಯೂರಪ್ಪನವರ ಮಗ ಸ್ಪಷ್ಟನೆ