ಲಖಪತಿ ದೀದಿ ಯೋಜನೆ ಅನ್ನು ಭಾರತದ ಕೇಂದ್ರ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿದೆ. ಇದರ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ಶಹರದ ಮಹಿಳೆಯರನ್ನು ಸ್ವಾವಲಂಬಿಗಳಾಗಿ ರೂಪಿಸುವುದು ಮತ್ತು ಉದ್ಯಮಿಗಳಿಗೆ ಪರಿವರ್ತಿಸುವುದು.

ಯೋಜನೆಯ ಉದ್ದೇಶಗಳು:
- ಮಹಿಳೆಯರಿಗೆ ಉದ್ಯಮ ಆರಂಭಿಸಲು ಸಹಾಯಮಾಡುವುದು
- ಸ್ವಸಹಾಯ ಸಂಘಗಳ (Self Help Groups – SHG) ಮೂಲಕ ಮಹಿಳೆಯರಲ್ಲಿ ಸ್ವಾವಲಂಬನೆಯ ಭರವಸೆ ಬೆಳೆಸುವುದು
- ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು
ಅನುದಾನ/ಸಾಲ ಸೌಲಭ್ಯ:
- ₹5 ಲಕ್ಷದವರೆಗೆ ಬಡ್ಡಿರಹಿತ ಸಾಲ
- ಈ ಹಣವನ್ನು ಮಹಿಳೆಯರು ತಮ್ಮ ಉದ್ಯಮ ಸ್ಥಾಪನೆಗೆ ಬಳಸಬಹುದು (ಹ್ಯಾಂಡಿಕ್ರಾಫ್ಟ್, ಬೆಯುಟಿ ಪಾರ್ಲರ್, ಪೌಲ್ಟ್ರಿ, ಟೈಲರಿಂಗ್, ಡೈರಿ, ಪ್ಯಾಕೇಜಿಂಗ್ ಮುಂತಾದವು)
ಅರ್ಹತೆಗಳು:
- ಅರ್ಜಿದಾರ್ತಿ ಭಾರತೀಯ ಮಹಿಳೆಯಾಗಿರಬೇಕು
- ವಯಸ್ಸು 18–50 ವರ್ಷ
- ಮಹಿಳೆ ಸ್ವಸಹಾಯ ಸಂಘದ ಸದಸ್ಯೆ ಆಗಿರಬೇಕು
- ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು
- ಕುಟುಂಬದ ಯಾರೂ ಸರ್ಕಾರಿ ಉದ್ಯೋಗದಲ್ಲಿರಬಾರದು
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಬ್ಯಾಂಕ್ ಖಾತೆ ವಿವರಗಳು
- ಆದಾಯ ಪ್ರಮಾಣ ಪತ್ರ
- ವಿಳಾಸ ಪುರಾವೆ
- ಶೈಕ್ಷಣಿಕ ಅರ್ಹತೆಯ ದಾಖಲೆ (ಅಗತ್ಯವಿದ್ದರೆ)
- ಸ್ವಸಹಾಯ ಸಂಘ ಸದಸ್ಯತ್ವ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಆನ್‌ಲೈನ್ ವಿಧಾನ:
- ವೆಬ್‌ಸೈಟ್ : Click Now
- ಮಾಹಿತಿಯನ್ನು ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಸಲ್ಲಿಸಿ, ರಶೀದಿ ಡೌನ್‌ಲೋಡ್ ಮಾಡಿ
ಆಫ್‌ಲೈನ್ ವಿಧಾನ:
- ಹತ್ತಿರದ ಸ್ವಸಹಾಯ ಸಂಘ ಕಚೇರಿ ಅಥವಾ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ
- ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ
- ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.