ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನಲ್ಲಿ ವಿಶೇಷವಾಗಿ ದಿವ್ಯಾಂಗ (ವಿಕಲಚೇತನ) ನಾಗರಿಕರಿಗೆ ಉಚಿತ ಎಲೆಕ್ಟ್ರಿಕ್ ತ್ರಿಚಕ್ರ ವಾಹನ (ಇ-ಸ್ಕೂಟರ್) ಮತ್ತು ವೀಲ್‌ಚೇರ್‌ಗಳನ್ನು ವಿತರಿಸಲು ಯೋಜನೆ ರೂಪಿಸಿದೆ. ಈ ಯೋಜನೆಯು ದಿವ್ಯಾಂಗ ವ್ಯಕ್ತಿಗಳ ಚಲನವಲನ ಸುಲಭಗೊಳಿಸಿ, ಅವರ ಆತ್ಮವಿಶ್ವಾಸ ಮತ್ತು ಸ್ವತಂತ್ರತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಯೋಜನೆಯ ಉದ್ದೇಶಗಳು
- ದಿವ್ಯಾಂಗ ನಾಗರಿಕರಿಗೆ ಸುಲಭ ಸಂಚಾರದ ಅವಕಾಶ ಒದಗಿಸುವುದು.
- ಅವರ ಆತ್ಮವಿಶ್ವಾಸ ಮತ್ತು ಸ್ವಾವಲಂಬಿತ ಜೀವನಶೈಲಿಯನ್ನು ಉತ್ತೇಜಿಸುವುದು.
ಅರ್ಹತಾ ಮಾನದಂಡಗಳು
- ಅರ್ಜಿದಾರರು BBMP ವ್ಯಾಪ್ತಿಯಲ್ಲಿ ಶಾಶ್ವತ ನಿವಾಸಿಗಳಾಗಿರಬೇಕು.
- ದಿವ್ಯಾಂಗ ಪ್ರಮಾಣಪತ್ರ ಹೊಂದಿರಬೇಕು.
- ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ದಿವ್ಯಾಂಗ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋಗಳು
- ಬ್ಯಾಂಕ್ ಖಾತೆ ವಿವರಗಳು
ಅರ್ಜಿ ಪರಿಶೀಲನೆಯ ನಂತರ, ಅರ್ಹ ಫಲಾನುಭವಿಗಳಿಗೆ ಉಚಿತ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಅಥವಾ ವೀಲ್‌ಚೇರ್ ವಿತರಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ