India Post Recruitment 2026 (c): SSLC ಆದವರಿಗೆ ಅಂಚೆ ಇಲಾಖೆಯಲ್ಲಿ 25,000+ ಉದ್ಯೋಗಾವಕಾಶ!

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ 📮
ಭಾರತೀಯ ಅಂಚೆ ಇಲಾಖೆ (India Post) 2026 ರ ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿಗೆ ಸಿದ್ಧತೆ ನಡೆಸುತ್ತಿದೆ. ದೇಶಾದ್ಯಂತ 25,000 ಕ್ಕೂ ಹೆಚ್ಚು ಹುದ್ದೆಗಳಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟ.

Post Office Job

🗓️ ಅರ್ಜಿ ಪ್ರಕ್ರಿಯೆ ಯಾವಾಗ?

ಲಭ್ಯ ಮಾಹಿತಿಯ ಪ್ರಕಾರ,
➡️ ಜನವರಿ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
➡️ ಅರ್ಜಿಗಳನ್ನು ಫೆಬ್ರವರಿ ಮೊದಲ ವಾರದವರೆಗೆ ಸ್ವೀಕರಿಸಲಾಗುತ್ತದೆ
➡️ ಮೊದಲ ಆಯ್ಕೆ ಪಟ್ಟಿಯನ್ನು ಫೆಬ್ರವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ
(ಇದು ತಾತ್ಕಾಲಿಕ ವೇಳಾಪಟ್ಟಿ)

🏤 ಲಭ್ಯವಿರುವ ಹುದ್ದೆಗಳು

ಗ್ರಾಮೀಣ ಡಾಕ್ ಸೇವಕ್ ನೇಮಕಾತಿಯ ಅಡಿಯಲ್ಲಿ ಈ ಹುದ್ದೆಗಳು ಸೇರಿವೆ:

  • ಶಾಖಾ ಪೋಸ್ಟ್ ಮಾಸ್ಟರ್ (BPM)
  • ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್

🎓 ಅರ್ಹತೆ

10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು
✅ 10ನೇ ತರಗತಿಯಲ್ಲಿ ಗಣಿತ ವಿಷಯ ಕಡ್ಡಾಯ
✅ ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯ ಜ್ಞಾನ ಅಗತ್ಯ
✅ ಮೂಲಭೂತ ಕಂಪ್ಯೂಟರ್ ಜ್ಞಾನ ಇರಬೇಕು
🖥️ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು

📝 ಆಯ್ಕೆ ಪ್ರಕ್ರಿಯೆ

ಇಂಡಿಯಾ ಪೋಸ್ಟ್ GDS ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ.
👉 ಅಭ್ಯರ್ಥಿಗಳನ್ನು 10ನೇ ತರಗತಿಯ ಅಂಕಗಳ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

💰 ವೇತನ ವಿವರ

  • BPM ಹುದ್ದೆ: ₹12,000 ರಿಂದ ₹29,000 (ಮಾಸಿಕ)
  • ABPM / ಡಾಕ್ ಸೇವಕ್: ₹10,000 ರಿಂದ ₹24,000 (ಮಾಸಿಕ)
    ➡️ ಇದರ ಜೊತೆಗೆ ಇತರೆ ಭತ್ಯೆಗಳೂ ಲಭ್ಯ

📌 ಕಡಿಮೆ ವಿದ್ಯಾರ್ಹತೆಯೊಂದಿಗೆ ಸರ್ಕಾರಿ ಉದ್ಯೋಗ ಪಡೆಯಲು ಇದು ಅತ್ಯುತ್ತಮ ಅವಕಾಶ.
ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಗಾಗಿ ಕಾದು ಗಮನವಿಟ್ಟು ತಯಾರಿ ನಡೆಸಿ.

Leave a Reply