ಕರ್ನಾಟಕ ಆಹಾರ ಇಲಾಖೆ ರೇಷನ್ ಕಾರ್ಡ್ ಹೊಂದಿರುವ ಎಲ್ಲ ಫಲಾನುಭವಿಗಳಿಗೆ ಇ-ಕೆವೈಸಿ (e-KYC) ಪ್ರಕ್ರಿಯೆ completion ಮಾಡುವುದು ಕಡ್ಡಾಯವೆಂದು ಪ್ರಕಟಿಸಿದೆ. ಇ-ಕೆವೈಸಿ ಮಾಡಿಸದೆ ಇರುವಾಗ, ಪಡಿತರ ವಿತರಣೆಯು ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ, ಫಲಾನುಭವಿಗಳು ತಮ್ಮ ಆಧಾರ್ ಹಾಗೂ ವೈಯಕ್ತಿಕ ಮಾಹಿತಿಯನ್ನು ಪಡಿತರ ವ್ಯವಸ್ಥೆಯೊಂದಿಗೆ ಡಿಜಿಟಲ್ ಮಾದರಿಯಲ್ಲಿ ಲಿಂಕ್ ಮಾಡಿಕೊಳ್ಳಬೇಕು.

ಈಗ ಈ ಪ್ರಕ್ರಿಯೆ ಅನ್ನು ಮನೆಬಾಗಿಲಿಗೇ ತಂದುಕೊಡಲಾಗಿದ್ದು, ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡುವ ಅವಶ್ಯಕತೆ ಇಲ್ಲ. ಕೇವಲ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ, ಸರಳ ಹಂತಗಳ ಮೂಲಕ ನೀವು ಈ ಕೆವೈಸಿ ಮಾಡಿಸಿಕೊಳ್ಳಬಹುದು.
Ration Card e-KYC ಮೊಬೈಲ್ನಲ್ಲಿಯೇ ಮಾಡಿ
ಇ-ಕೆವೈಸಿ ಪ್ರಕ್ರಿಯೆ ಹೀಗಿದೆ:
- ಮೊದಲು Google Play Store ಗೆ ಹೋಗಿ Mera e-KYC App ಮತ್ತು Aadhaar Face ID ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.
- “Mera e-KYC App” ಓಪನ್ ಮಾಡಿ, ನಿಮ್ಮ ರಾಜ್ಯವನ್ನು Karnataka ಎಂದು ಆಯ್ಕೆ ಮಾಡಿ.
- ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, OTP ಪಡೆದು ಲಾಗಿನ್ ಆಗಿ.
- ನಂತರ ನಿಮ್ಮ ವೈಯಕ್ತಿಕ ವಿವರಗಳನ್ನು ಪರಿಶೀಲಿಸಿ.
- Face e-KYC ಆಯ್ಕೆಮಾಡಿ, ಕ್ಯಾಮೆರಾದ ಮೂಲಕ ನಿಮ್ಮ ಫೋಟೋ ಕ್ಲಿಕ್ ಮಾಡಿ.
ಈ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ಮೇಲೆ, ನಿಮ್ಮ ಇ-ಕೆವೈಸಿ ಅಪ್‌ಡೇಟ್ ಆಗುತ್ತದೆ.
ಇದು ನಕಲಿ ಪಡಿತರ ಚೀಟಿಗಳನ್ನು ತಡೆಯಲು, ಫಲಾನುಭವಿಗಳ ನೈಜತೆ ಖಚಿತಪಡಿಸಲು ಹಾಗೂ ಪಡಿತರ ವಿತರಣೆಯ ಪಾರದರ್ಶಕತೆಗೆ ಸಹಕಾರಿಯಾಗುತ್ತದೆ.