in

ಕನ್ನಡ ನಾಡಿನ ಹಿರಿಮೆ ಪ್ರಬಂಧ | Kannada Nadina Hireme Prabandha in Kannada

Kannada Nadina Hireme Prabandha in Kannada
Kannada Nadina Hireme Prabandha in Kannada

ಕನ್ನಡ ನಾಡಿನ ಹಿರಿಮೆ ಪ್ರಬಂಧ, Kannada Nadina Hireme Prabandha in Kannada, Greatness of Kannada Nation Essay in Kannada Kannada Nadina Hireme Prabandha ಕನ್ನಡದಲ್ಲಿ

Kannada Nadina Hireme Prabandha in Kannada

Kannada Nadina Hireme Prabandha in Kannada
Kannada Nadina Hireme Prabandha in Kannada

ಕನ್ನಡ ನಾಡಿನ ಹಿರಿಮೆ ಪ್ರಬಂಧ

ಪೀಠಿಕೆ :

ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ… ಕನ್ನಡ. ಕಸ್ತೂರಿ. ಕನ್ನಡ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. “ಕನ್ನಡ ಭಾಷೆ ನಮ್ಮ ಸಂಸ್ಕೃತಿ”, ಕರ್ನಾಟಕವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಅದು ನಮ್ಮ ಗುರುತಾಗಿದೆ. 

ವಿಷಯ ವಿವರಣೆ :

ಹಳೆಯ ಪ್ರಾಚೀನ ಶತಮಾನದಲ್ಲಿ ಅಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯು ಬಹಳ ಅಭಿವೃದ್ದಿಯಲ್ಲಿ ಪ್ರಾರಂಭವಾಯಿತು. ಅಭಿಜಾತ ಭಾಷೆಯೆಂಬ ಸ್ಥಾನವನ್ನು ಕೇಂದ್ರ ಸರಕಾರದಿಂದ ಕನ್ನಡ ಭಾಷೆಯು ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯು ಬಹಳವಾಗಿದೆ. ಕನ್ನಡ ಭಾಷೆಯು ವ್ಯಾಪಾರ ಮತ್ತು ವಾಣಿಜ್ಯ ಅಲ್ಲದೇ ಪ್ರತಿಯೊದು ಕ್ಷೇತ್ರದಲ್ಲಿಯೂ ಉತ್ತಮ ಭಾಷೆಯಾಗಿ ಬೆಳೆಯುತ್ತಿದೆ.

ಕರ್ನಾಟಕ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ಸಂಸ್ಕೃತ ಭಾಷೆಯಿಂದ ಕನ್ನಡ ಎಂಬ ಪದವು ಅಂದರೆ ಕರ್ನಾಟಕವು ಹುಟ್ಟಿದೆ ಎಂದು ಹೇಳಬಹುದು. ಇದರ ಅರ್ಥ ಕನ್ನಡ ನಾಡು ಎನ್ನಲಾಗಿದೆ. ಆದರೆ ಕರ್ನಾಟಕ ಎಂಬ ಪದದ ಹುಟ್ಟು, ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು ಎಂದು ಹೇಳಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಕರ್ನಾಟಕವನ್ನು ಕರೆಯಲಾಗುತ್ತದೆ.

ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.

  1. ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ;
  2. ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ;
  3. ನಡುಗನ್ನಡ – ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ;
  4. ಹೊಸಗನ್ನಡ – ೧೮ನೆಯ ಶತಮಾನದ ಆದಿಯಿಂದ ಈಚೆಗೆ.

ಸುಮಾರು ಎರಡೂವರೆ ಶತಮಾನವನ್ನು ಹೊಂದಿರುವ ಶ್ರೀಮಂತ ಭಾಷೆಯು ಕನ್ನಡವಾಗಿದೆ. ಕನ್ನಡ ಭಾಷೆಯು ವಿಶ್ವದಲ್ಲಿ ಪ್ರಾಚೀನ ಭಾಷೆಯಾಗಿದೆ. ಆದರೆ ಇಂದಿನ ಆಧುನಿಕ ಕಾಲದಲ್ಲಿ ಪ್ರತಿಯೊಬ್ಬ ತಂದೆ-ತಾಯಿಗಳು ಮಕ್ಕಳಿಗೆ ಕನ್ನಡ ನಾಡಿನ ಭಾಷೆ, ಸಂಸ್ಕೃತಿಯ ಆಚಾರ ವಿಚಾರವನ್ನು ತಿಳಿ ಹೇಳುತ್ತಿಲ್ಲ. ಮಕ್ಕಳು ಕೂಡ ಕನ್ನಡ ಭಾಷೆ ಮಾತನಾಡದಂತೆ ಅವರಿಗೆ ಹೇಳುತ್ತಾರೆ. ಇದು ಕನ್ನಡಿಗರಾಗಿಯೂ ಪ್ತತಿಯೊಬ್ಬ ತಂದೆ ತಾಯಿಗಳು ವ್ಯರ್ಥ ಎನ್ನಬಹುದು.

ಪ್ರತಿ ಜನಾಂಗದವರು ಇಲ್ಲಿ ವಾಸಿಸುತ್ತಿದ್ದು, ಎಲ್ಲಾ ಧರ್ಮದವರು ಒಂದೇ. ಎಲ್ಲೇ ಇದ್ದರು ಪ್ರತಿಯೊಬ್ಬ ಕನ್ನಡಿಗನೂ ಕನ್ನಡತನವನ್ನು ಕೊಂಡಾಡಬೇಕು, ಕನ್ನಡವನ್ನು ಉಳಿಸಬೇಕು. ಯಾವುದೇ ಕನ್ನಡ ಪರ ಸಂಘಟನೆಗಳು ಸಹ ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಿರದೆ, ಪ್ರತಿದಿನವೂ ಕನ್ನಡತನವನ್ನು ಮೆರೆಯಬೇಕು. ಕನ್ನಡ ಪರ ಹೋರಾಟಗಳು ಪ್ರತಿದಿನವೂ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡ ನಾಡನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಹೊಣೆ ಜವಾಬ್ದಾರಿಯಾಗಿರುತ್ತದೆ.

ಕನ್ನಡದ ಇತಿಹಾಸ, ಮಹತ್ವ, ಕನ್ನಡ ಭಾಷೆ, ಸಂಸ್ಕೃತಿ, ಕನ್ನಡದ ವೈವಿಧ್ಯತೆಯನ್ನು ಮುಂದೆ ಬರುವ ಮಕ್ಕಳಿಗೆ ಪ್ರತಿಯೊಬ್ಬರೂ ತಿಳಿಸುವುದು ಎಲ್ಲರ ಕರ್ತವ್ಯವಾಗಿದೆ. ಕರ್ನಾಟಕ ಏಕೀಕರಣಕ್ಕೆ ಹಲವಾರು ಗಣ್ಯರ ಹೋರಾಟದ ಪ್ರತಿಫಲವು ಕನ್ನಡ ರಾಜ್ಯೋತ್ಸವವಾಗಿದೆ. ಕನ್ನಡಿಗರು ಆಚರಿಸುವ ಹಬ್ಬಗಳನ್ನು ಬೇರೆ ಭಾಷೆಯ ಜನತೆಯನ್ನು ಕರೆದು ನಮ್ಮ ಸಾಹಿತ್ಯ, ಸಂಸ್ಕೃತಿ ಬಗ್ಗೆ, ನಮ್ಮ ಆಚಾರ-ವಿಚಾರಗಳನ್ನು ಅವರಿಗೆ ಪರಿಚಯ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ. ಚಿತ್ರಕಲೆ , ಶಿಲ್ಪ ಕಲೆ , ಸಂಗೀತ , ಸಾಹಿತ್ಯ ಮುಂತಾದವುಗಳಲ್ಲಿ ಕನ್ನಡದ ಹಿರಿಮೆಯು ಪ್ರಖ್ಯಾತಿಯಾಗಿದೆ. ಈ ನಾಡಿನ ಜಾನಪದ ಕಲೆ – ಸಂಸ್ಕೃತಿ, ಕವನಗಳು, ವಚನಗಳು, ದಾಸರ ಪದಗಳು ನಮ್ಮ ಕನ್ನಡ ನಾಡಿನ ಹಿರಿತನವನ್ನು ಸೂಚಿಸುತ್ತವೆ.

ಕನ್ನಡ ನಾಡಿನ ಹಿರಿಮೆಯನ್ನು, ವಿದ್ವಾಂಸರು, ಗೌರವವನ್ನು ಕನ್ನಡದ ಕವಿಗಳು, ದಾಸರು, ಜಾನಪದರು, ವಿಭಿನ್ನ ರೀತಿಯಲ್ಲಿ ಸುಮಧುರವಾಗಿ ಹಾಡಿ ಹೊಗಳಿದ್ದಾರೆ. ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಮೇಲಕ್ಕೆ ತರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.

ಉಪಸಂಹಾರ :

ಕೇವಲ ಕನ್ನಡತನವನ್ನು ಕನ್ನಡ ರಾಜ್ಯೋತ್ಸದಂದು ಮಾತ್ರ ಆಚರಿಸದೇ ಪ್ರತಿದಿನವೂ ಕನ್ನಡದ ಬಗ್ಗೆ ಹೆಮ್ಮೆ ಅಭಿಮಾನ ಪ್ರತಿಯೊಬ್ಬರಲ್ಲೂ ಇರಬೇಕು ಇದು ನಮ್ಮ ನಾಡು ನಮ್ಮ ಹೆಮ್ಮೆ ಎನ್ನುವ ಮನೋಭಾವನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ಇರಬೇಕು.

FAQ :

1. ಕರ್ನಾಟಕ ಎಂಬ ಪದದ ಹುಟ್ಟು ತಿಳಿಸಿ.

ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು. ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ.

2. ಕನ್ನಡ ರಾಜ್ಯೋತ್ಸವವನ್ನು ಯಾವಾಗ ಆಚರಿಸಲಾಗುತ್ತದೆ ?

ನವೆಂಬರ್‌ 1 ರಂದು ಆಚರಿಸಲಾಗುತ್ತದೆ.

3. ಕನ್ನಡದ ನಾಡಗೀತೆ ರಚಿಸಿದವರು ಯಾರು ?

ಕುವೆಂಪು

ಇತರೆ ವಿಷಯಗಳು :

ಆನ್ಲೈನ್ ಶಿಕ್ಷಣದ ಬಗ್ಗೆ ಪ್ರಬಂಧ 

ನಿರುದ್ಯೋಗ ಪ್ರಬಂಧ

ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಬಂಧ

ಸ್ವಚ್ಛ ಭಾರತ್ ಅಭಿಯಾನ ಪ್ರಬಂಧ

What do you think?

Written by Salahe24

Leave a Reply

GIPHY App Key not set. Please check settings

Essay on Soldiers in Kannada

ಸೈನಿಕರ ಬಗ್ಗೆ ಪ್ರಬಂಧ | Essay on Soldiers in Kannada

School Bag Making Business

ಸ್ಕೂಲ್ ಬ್ಯಾಗ್ ತಯಾರಿಸುವ ಬ್ಯುಸಿನೆಸ್‌ | School Bag Making Business