ಪ್ರಧಾನ ಮಂತ್ರಿ ಆವಾಸ್ ಯೋಜನೆ | PMAY

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅನ್ನು 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದರು. ಈ ಯೋಜನೆಯ ಉದ್ದೇಶವೆಂದರೆ ದೇಶದ ಪ್ರತಿಯೊಬ್ಬ ಬಡ ಕುಟುಂಬಕ್ಕೆ 2022ರೊಳಗಾಗಿ ತಮ್ಮದೇ ಆದ ಮನೆ ಒದಗಿಸುವುದು. ಈ ಯೋಜನೆ ಗ್ರಾಮೀಣ (PMAY-G) ಮತ್ತು ನಗರ (PMAY-U) – ಎಂಬ ಎರಡು ಭಾಗಗಳಲ್ಲಿದೆ.

PMAY

ಇದೀಗ, 2024ರ ಸೆಪ್ಟೆಂಬರ್ 1ರಿಂದ ಆರಂಭವಾದ PMAY 2.0 ಯೋಜನೆ 2029ರ ವರೆಗೆ ವಿಸ್ತರಿಸಲ್ಪಟ್ಟಿದ್ದು, ಇದರಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ₹2.5 ಲಕ್ಷದವರೆಗೆ ಮನೆ ನಿರ್ಮಾಣ ಸಬ್ಸಿಡಿ ನೀಡಲಾಗುತ್ತದೆ.

✅ ಅರ್ಹತೆ:

  • ಭಾರತೀಯ ನಾಗರಿಕರಾಗಿರಬೇಕು
  • ಕುಟುಂಬದ ವಾರ್ಷಿಕ ಆದಾಯವು ನಿರ್ದಿಷ್ಟ ಮಿತಿಗಿಂತ ಕಡಿಮೆ ಇರಬೇಕು:
    • EWS (₹3 ಲಕ್ಷಕ್ಕಿಂತ ಕಡಿಮೆ)
    • LIG (₹3-6 ಲಕ್ಷ)
    • MIG-I & II (₹6-18 ಲಕ್ಷ)
  • ತಮ್ಮ ಹೆಸರಿನಲ್ಲಿ ಅಥವಾ ಕುಟುಂಬ ಸದಸ್ಯರ ಹೆಸರಿನಲ್ಲಿ ಮನೆಯ ಇಲ್ಲದಿರಬೇಕು
  • 20 ವರ್ಷಗಳಲ್ಲಿ ಯಾವುದೇ ಗೃಹ ಯೋಜನೆಯ ಲಾಭ ಪಡೆಯಿರಬಾರದು

📄 ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಆದಾಯ ಮತ್ತು ಜಾತಿ ಪ್ರಮಾಣಪತ್ರ
  • ಮನೆ ಸಂಬಂಧಿತ ದಾಖಲೆಗಳು
  • ಬ್ಯಾಂಕ್ ಪಾಸ್ ಬುಕ್
  • ಪೋಟೋ, ಮೊಬೈಲ್ ನಂಬರ್

📝 ಅರ್ಜಿ ಸಲ್ಲಿಸುವ ವಿಧಾನ:

  • ಅಧಿಕೃತ ವೆಬ್‌ಸೈಟ್ pmaymis.gov.in ಅಥವಾ ಹತ್ತಿರದ CSC ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು
  • ಅರ್ಜಿ ಫಾರ್ಮ್ ಭರ್ತಿ ಮಾಡಿ, ದಾಖಲೆಗಳನ್ನು ಸಲ್ಲಿಸಿ
  • ಆಧಾರ್ OTP ಮೂಲಕ ದೃಢೀಕರಣ ಅಗತ್ಯ

💡 ಮುಖ್ಯ ಸೂಚನೆಗಳು:

  • ಮಹಿಳಾ, ದಿವ್ಯಾಂಗ ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ
  • ಸಬ್ಸಿಡಿ DBT ಮೂಲಕ ನೇರವಾಗಿ ಖಾತೆಗೆ ಜಮೆಯಾಗುತ್ತದೆ
  • ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು

Leave a Reply