PMEGP ಯೋಜನೆ: ನಿಮ್ಮ ಸ್ವಂತ ಉದ್ಯಮಕ್ಕೆ 65% ವರೆಗೆ ಸಹಾಯಧನ – 35% ಸಾಲ ಮನ್ನಾ

ಸ್ವಂತ ಉದ್ಯಮ ಆರಂಭಿಸುವ ಕನಸು ಹೊಂದಿರುವವರಿಗೆ ಕೇಂದ್ರ ಸರ್ಕಾರದ PMEGP (Prime Minister’s Employment Generation Programme) ಯೋಜನೆ ಅತ್ಯುತ್ತಮ ಅವಕಾಶವಾಗಿದೆ. ಈ ಯೋಜನೆಯಡಿ ಅರ್ಹ ಉದ್ಯಮಿಗಳೆಗೆ ಒಟ್ಟು ಯೋಜನ ವೆಚ್ಚದ 35% ವರೆಗೆ ಸಹಾಯಧನ ಪಡೆಯುವ ವ್ಯವಸ್ಥೆ ಇದೆ. ಉದ್ಯೋಗ ಸೃಷ್ಟಿ, ಹಣಕಾಸು ನೆರವು ಮತ್ತು ಯುವಕರಿಗೆ ಉದ್ಯಮಶೀಲತೆಯ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ.

PMEGP
PMEGP

ಈ ಲೇಖನದಲ್ಲಿ PMEGP ಯೋಜನೆಯಡಿ ಯಾವ ಉದ್ಯಮಗಳಿಗೆ ಸಾಲ ಸಿಗುತ್ತದೆ? ಯಾರು ಅರ್ಜಿ ಸಲ್ಲಿಸಬಹುದೇ? ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಸಹಾಯಧನ ಮಂಜೂರಾತಿ ವಿಧಾನ – ಎಲ್ಲದರ ಸಂಪೂರ್ಣ ವಿವರ ನೀಡಲಾಗಿದೆ.

PMEGP ಯೋಜನೆಯಡಿಯಲ್ಲಿ ಸಬ್ಸಿಡಿ ಸಿಗುವ ಉದ್ಯಮಗಳು

PMEGP ಯೋಜನೆಯಡಿ ಅನೇಕ ಸೇವಾ ಮತ್ತು ಉತ್ಪಾದನಾ ಆಧಾರಿತ ಉದ್ಯಮಗಳಿಗೆ ಸಹಾಯಧನ ಸಿಗುತ್ತದೆ. ಕೆಲವು ಉದಾಹರಣೆಗಳು:

  • ಸಿದ್ಧ ಉಡುಪು ತಯಾರಿಕೆ / ಟೈಲರಿಂಗ್
  • ಬ್ಯೂಟಿ ಪಾರ್ಲರ್
  • ಪೇಪರ್ ಪ್ಲೇಟ್ ತಯಾರಿಕೆ
  • ಎಲೆಕ್ಟ್ರಿಕಲ್ ಸರ್ವಿಸ್
  • ಸೈಬರ್ ಸೆಂಟರ್
  • ಟೂ ವೀಲರ್ ಗ್ಯಾರೆಜ್
  • ಲೈಟಿಂಗ್ & ಸೌಂಡ್ ಸರ್ವಿಸ್
  • ಮರದ ಕೆಲಸ / ಫರ್ನಿಚರ್
  • ಆಹಾರ ಉತ್ಪನ್ನ ತಯಾರಿಕೆ
  • ಅಡಿಕೆ ಹಾಳೆ ತಟ್ಟೆ ತಯಾರಿಕೆ
  • ಮೊಬೈಲ್ ಶಾಪ್
  • ಕ್ಯಾಂಟೀನ್ / ಹೋಟೆಲ್
  • ಅಕ್ಕಿ ಹಿಟ್ಟಿನ ಗಿರಣಿ / ಎಣ್ಣೆ ಮಿಲ್
  • ಬೇಕರಿ
  • ಕೋಳಿ ಸಾಕಾಣಿಕೆ
  • ಹೈನುಗಾರಿಕೆ
  • ವೆಲ್ಡಿಂಗ್ ವರ್ಕ್ಸ್
  • ಕ್ಯಾಟರಿಂಗ್
  • ತಂಪು ಪಾನೀಯ ತಯಾರಿಕೆ
  • ದೀಪದ ಬತ್ತಿ ತಯಾರಿಕೆ
    ಇತ್ಯಾದಿ ಅನೇಕ ಸಣ್ಣ/ಮಧ್ಯಮ ಉದ್ಯಮಗಳು ಇದರಡಿಯಲ್ಲಿ ಅರ್ಹವಾಗಿರುತ್ತವೆ.

PMEGP – ಯಾರು ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರನು ಭಾರತೀಯ ನಾಗರಿಕನಾಗಿರಬೇಕು
  • ಎಲ್ಲಾ ವರ್ಗ/ಜಾತಿಯವರು ಅರ್ಹರು
  • ಗ್ರಾಮ ಹಾಗೂ ನಗರ – ಎಲ್ಲರಿಗೂ ಅವಕಾಶ ಇದೆ
  • ಈಗಾಗಲೇ PMEGP ಸಹಾಯಧನ ಪಡೆದವರು ಪುನಃ ಅರ್ಜಿ ಸಲ್ಲಿಸಲು ಅವಕಾಶವಿಲ್ಲ

ಅರ್ಹತಾ ಪರಿಶೀಲನೆ – ಅರ್ಜಿ ಸಲ್ಲಿಸುವ ಮುನ್ನ ಮಾಡಬೇಕಾದ ಕೆಲಸ

ಅರ್ಜಿಯ ಮೊದಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ:

  • ಯೋಜನೆಗೆ ಅಗತ್ಯ ಮಾಷಿನ್/ಉಪಕರಣಗಳ ಕೋಟೇಶನ್ ತಿಳಿದುಕೊಳ್ಳಿ
  • ಒಟ್ಟು ಯೋಜನಾ ವೆಚ್ಚವನ್ನು ಅಂದಾಜಿಸಿ
  • ನಿಮ್ಮ CIBIL Score 700 ಅಥವಾ -1 ಇದ್ದರೆ ಮಾತ್ರ ಸಾಲ ಮಂಜೂರಾಗುವ ಸಾಧ್ಯತೆ ಹೆಚ್ಚು

ಅರ್ಜಿಗೆ ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಜನಸಂಖ್ಯೆ/ವಾಸ್ತವ್ಯ ಪ್ರಮಾಣ ಪತ್ರ
  • PAN ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಪಾಸ್‌ಬುಕ್ ನಕಲು
  • ಯೋಜನಾ ವರದಿ (Project Report)

PMEGP Subsidy – ಸಬ್ಸಿಡಿ ಹೇಗೆ ಸಿಗುತ್ತದೆ?

  1. ಆನ್‌ಲೈನ್ ಅರ್ಜಿಯನ್ನು ಪರಿಶೀಲಿಸಿ DIC ಕಚೇರಿ ನಿಮ್ಮ ಯೋಜನೆಯನ್ನು ಮೌಲ್ಯಮಾಪನ ಮಾಡುತ್ತದೆ.
  2. ನಂತರ ಅದನ್ನು ನೀವು ಆಯ್ಕೆ ಮಾಡಿದ ಬ್ಯಾಂಕ್ ಶಾಖೆಗೆ ಕಳುಹಿಸಲಾಗುತ್ತದೆ.
  3. ಬ್ಯಾಂಕ್ ಅಧಿಕಾರಿಗಳು ಅಗತ್ಯವಿದ್ದರೆ ಸ್ಥಳ ಪರಿಶೀಲನೆ (Site Verification) ನಡೆಸುತ್ತಾರೆ.
  4. ಸಾಲ ಮಂಜೂರಾದ ಬಳಿಕ ಬ್ಯಾಂಕ್ ನೇರವಾಗಿ ಯಂತ್ರೋಪಕರಣ/ಮಾಷಿನ್ ಮಾರಾಟಗಾರರಿಗೆ ಹಣ ಪಾವತಿಸುತ್ತದೆ.
  5. ನಂತರ ಕೇಂದ್ರ ಸರ್ಕಾರದಿಂದ 35% ವರೆಗೆ ಸಹಾಯಧನ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ.
  6. ಈ ಸಬ್ಸಿಡಿಯನ್ನು ಬ್ಯಾಂಕ್ ನಿಮ್ಮ ಹೆಸರಿನಲ್ಲಿ 3 ವರ್ಷಗಳವರೆಗೆ FD (Lock-in) ಆಗಿ ಇಡುತ್ತದೆ.
  7. 3 ವರ್ಷ ಪೂರ್ಣವಾದ ನಂತರ ನೀವು ಸಾಲವನ್ನು ಸರಿಯಾಗಿ ಪಾವತಿಸಿದ್ದರೆ, ಸಬ್ಸಿಡಿ ಮೊತ್ತವನ್ನು ನಿಮ್ಮ ಸಾಲಕ್ಕೆ ಅಡ್ಜಸ್ಟ್ ಮಾಡಲಾಗುತ್ತದೆ ಅಥವಾ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ಸಾರಾಂಶ

PMEGP ಯೋಜನೆ ಯುವಕರಿಗೆ ಉದ್ಯಮ ಆರಂಭಿಸಲು ಅತ್ಯುತ್ತಮ ಅವಕಾಶ. ಸಬ್ಸಿಡಿ, ಕಡಿಮೆ ಬಡ್ಡಿ ಮತ್ತು ಸರ್ಕಾರದ ಬೆಂಬಲ – ಇವುಗಳ ಸಹಾಯದಿಂದ ಸ್ವಾವಲಂಬನೆಯತ್ತ ಹೆಜ್ಜೆ ಇಡುವುದು ಸಾಧ್ಯ. ಮಾಹಿತಿಯನ್ನು ಸರಿಯಾಗಿ ತಿಳಿದು ಮಾತ್ರ ಅರ್ಜಿ ಸಲ್ಲಿಸುವುದು ಬಹಳ ಮುಖ್ಯ.

ಅರ್ಜಿ ಸಲ್ಲಿಸುವ ವಿಧಾನ

Leave a Reply