Create A Reel Win The Price | ರೀಲ್ಸ್ ಮಾಡಿ ₹50,000 ಬಹುಮಾನ ಗೆಲ್ಲಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board – KSPCB) ತನ್ನ 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ರೀಲ್ಸ್ ಸ್ಪರ್ಧೆ (Instagram Reels Competition) ಆಯೋಜಿಸಿದೆ.

Create A Reel Save The Planet & Win The Price

ಸ್ಪರ್ಧೆಯ ಉದ್ದೇಶ

  • ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರೊಳಗೆ ಜಾಗೃತಗೊಳಿಸುವುದು.
  • ಯುವಜನರ ಸೃಜನಶೀಲತೆಯ ಮೂಲಕ ಪರಿಸರ ಕಾಪಾಡುವ ಸಂದೇಶವನ್ನು ಹರಡುವುದು.
  • ದಿನನಿತ್ಯದ ಸಣ್ಣ ಕಾರ್ಯಗಳಿಂದಲೂ ಪರಿಸರ ಉಳಿಸಬಹುದೆಂಬ ಸಂದೇಶ ನೀಡುವುದು.

ಏನಿದು ರೀಲ್ಸ್ ಸ್ಪರ್ಧೆ?

ಭಾಗವಹಿಸುವವರು ತಮ್ಮದೇ ಕೌಶಲ್ಯದಿಂದ 30 ರಿಂದ 60 ಸೆಕೆಂಡುಗಳ ಒಳಗಿನ ಸೃಜನಾತ್ಮಕ ರೀಲ್ಸ್ ತಯಾರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ #ParisaraRakshisi ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಬೇಕು.
ಅತೀ ಹೆಚ್ಚು ವೀಕ್ಷಣೆ (views) ಗಳಿಸಿದ ಹಾಗೂ ಉತ್ತಮ ವಿಷಯ ಹೊಂದಿದ ವಿಡಿಯೋಗಳಿಗೆ ಆಕರ್ಷಕ ರಾಜ್ಯಮಟ್ಟದ ಬಹುಮಾನಗಳು ನೀಡಲಾಗುತ್ತವೆ.

ಬಹುಮಾನ ವಿವರಗಳು

ಸ್ಥಾನಬಹುಮಾನ ಮೊತ್ತ
🥇 ಮೊದಲನೇ ಸ್ಥಾನ₹50,000/-
🥈 ಎರಡನೇ ಸ್ಥಾನ₹25,000/-
🥉 ಮೂರನೇ ಸ್ಥಾನ₹10,000/-

📅 ಸ್ಪರ್ಧೆ ಅವಧಿ

🗓️ ಆರಂಭ: 10 ಅಕ್ಟೋಬರ್ 2025
🗓️ ಅಂತಿಮ ದಿನಾಂಕ: 05 ನವೆಂಬರ್ 2025

📝 ನೋಂದಣಿ ವಿಧಾನ

ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯ.

Step 1: 👉 ಇಲ್ಲಿ ಕ್ಲಿಕ್ ಮಾಡಿ “Register Now” (ಅಧಿಕೃತ Google Form ಗೆ ಹೋಗಲು).
Step 2: ನಿಮ್ಮ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯನ್ನು ತುಂಬಿ, “Submit” ಕ್ಲಿಕ್ ಮಾಡಿ.

ಥೀಮ್ ಹಾಗೂ ಮಾರ್ಗಸೂಚಿಗಳು

  • ಥೀಮ್: “ಪರಿಸರ ಸಂರಕ್ಷಣೆ”
    (ನೀರಿನ ಮಿತ ಬಳಕೆ, ಪ್ಲಾಸ್ಟಿಕ್ ಮುಕ್ತ ಜೀವನ, ಹಸಿರೀಕರಣ, ಶುದ್ಧ ವಾಯು, ಮರುಬಳಕೆ ಇತ್ಯಾದಿ)
  • ಅವಧಿ: ಗರಿಷ್ಠ 60 ಸೆಕೆಂಡು
  • ಸ್ವಂತಿಕೆ: ನಿಮ್ಮದೇ ಸೃಜನಾತ್ಮಕ ಕಲ್ಪನೆ ಇರಬೇಕು
  • ಸಂದೇಶ: ಸರಳ, ಸ್ಪಷ್ಟ ಮತ್ತು ಪರಿಣಾಮಕಾರಿಯಾಗಿ ಇರಲಿ
  • ಫಾರ್ಮ್ಯಾಟ್: Vertical (9:16)
  • ಭಾಷೆ: ಕನ್ನಡ ಅಥವಾ ಇಂಗ್ಲಿಷ್ (ಅಥವಾ ಎರಡೂ)
  • ಸಂಗೀತ: ಕಾಪಿರೈಟ್ ಮುಕ್ತ ಸಂಗೀತ ಅಥವಾ ಸ್ವಂತ ಧ್ವನಿ ಬಳಕೆ
  • ಹ್ಯಾಶ್‌ಟ್ಯಾಗ್: #ParisaraRakshisi
  • ಕೊಲಾಬರೇಶನ್: @pm.narendraswamy ಹಾಗೂ @kspcb_official ಇನ್‌ಸ್ಟಾಗ್ರಾಂ ಖಾತೆಗಳಿಗೆ ಕಡ್ಡಾಯವಾಗಿ ಕೊಲಾಬರೇಟ್ ಕಳುಹಿಸಬೇಕು.

Compitation ಗೆ ಭಾಗವಹಿಸಲು

🔗 Karnataka State Pollution Control Board ಅಧಿಕೃತ ವೆಬ್ಸೈಟ್ – Click Here

🌏 ನೀವು ಮಾಡಬಹುದಾದ ಬದಲಾವಣೆ

ಸಣ್ಣ ಪ್ರಯತ್ನದಿಂದ ದೊಡ್ಡ ಬದಲಾವಣೆ ಸಾಧ್ಯ!
ನಿಮ್ಮ ಕ್ರಿಯೇಟಿವಿಟಿಯಿಂದ ಪರಿಸರ ಕಾಪಾಡುವ ಸಂದೇಶವನ್ನು ನೀಡಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

Leave a Reply