ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಿರಿಯ ನಾಗರಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು **‘ದಂತ ಭಾಗ್ಯ ಯೋಜನೆ’**ಯನ್ನು ಜಾರಿಗೆ ತಂದಿದೆ. ವಯಸ್ಸು ಹೆಚ್ಚಾದಂತೆ ಹಲ್ಲಿನ ಸಮಸ್ಯೆಗಳು ಸಾಮಾನ್ಯವಾಗುತ್ತವೆ. ಇದರಿಂದ ಆಹಾರ ಸೇವನೆ ಮಾತ್ರವಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರವು ಅರ್ಹ ಹಿರಿಯರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಹಲ್ಲಿನ ಸೆಟ್ (Dentures) ಒದಗಿಸುತ್ತಿದೆ.

ಬಹುತೇಕ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹಲ್ಲಿನ ಸೆಟ್ ಮಾಡಿಸಿಕೊಳ್ಳಲು ಹೆಚ್ಚಿನ ವೆಚ್ಚ ಬೇಕಾಗುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗದ ಹಿರಿಯರು ಈ ಯೋಜನೆಯ ಮೂಲಕ ಯಾವುದೇ ಶುಲ್ಕವಿಲ್ಲದೆ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯ ಬಗ್ಗೆ ಇನ್ನೂ ಹಲವರಿಗೆ ಮಾಹಿತಿ ಇಲ್ಲದಿರುವುದರಿಂದ, ಇಲ್ಲಿದೆ ಸಂಪೂರ್ಣ ವಿವರ.
ದಂತ ಭಾಗ್ಯ ಯೋಜನೆಯ ಅರ್ಹತೆ (Eligibility)
ಈ ಯೋಜನೆಯ ಸೌಲಭ್ಯ ಪಡೆಯಲು ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು:
- ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರಬೇಕು
- ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು
- ಗಟ್ಟಿ ಹಲ್ಲುಗಳು ಇಲ್ಲದಿರುವುದು
ಈಗಾಗಲೇ ಯೋಜನೆಯ ಪ್ರಯೋಜನ ಪಡೆದವರು
ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯಾದ್ಯಂತ 41,218ಕ್ಕೂ ಹೆಚ್ಚು ಜನರು ಈಗಾಗಲೇ ದಂತ ಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ದಂತ ಭಾಗ್ಯ ಯೋಜನೆಯ ಪ್ರಯೋಜನ ಪಡೆಯುವ ವಿಧಾನ
ಅರ್ಹ ಹಿರಿಯ ನಾಗರಿಕರು ಕೆಳಗೆ ಅರ್ಜಿ ಹಾಕಿ ಉಚಿತ ಹಲ್ಲಿನ ಸೆಟ್ ಸೇವೆ ಪಡೆಯಬಹುದು:
ಅಗತ್ಯ ದಾಖಲೆಗಳು
ಯೋಜನೆಯ ಸೌಲಭ್ಯ ಪಡೆಯಲು ಕೆಳಗಿನ ದಾಖಲೆಗಳು ಕಡ್ಡಾಯ:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಬಿಪಿಎಲ್ ರೇಷನ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
