ಕರ್ನಾಟಕ ಸರ್ಕಾರದ ಜನಪ್ರಿಯ ಶಕ್ತಿ ಯೋಜನೆ ಈಗ ಹೊಸ ಹಂತಕ್ಕೆ ಪ್ರವೇಶ ಮಾಡಿದೆ. ಇನ್ನು ಮುಂದೆ ಉಚಿತ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಲಿದೆ ಕರ್ನಾಟಕ ಸರ್ಕಾರದ ಜನಪ್ರಿಯ ಶಕ್ತಿ ಯೋಜನೆ ಇನ್ನೂ ಹೆಚ್ಚು ಡಿಜಿಟಲ್ ಹಾಗೂ ಸುಧಾರಿತ ವ್ಯವಸ್ಥೆಗೆ ಹೋಗುತ್ತಿದೆ. ಈ ಯೋಜನೆ ಕರ್ನಾಟಕ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಆರಂಭಿಸಿದ ಪ್ರಮುಖ ಯೋಜನೆಗಳಲ್ಲಿ ಒಂದು.

ಶಕ್ತಿ ಯೋಜನೆ ಎಷ್ಟು ದೊಡ್ಡದು ಗೊತ್ತಾ?
✅ 2023 ಜೂನ್ 11 ರಿಂದ ಆರಂಭ
✅ ಈಗಾಗಲೇ 660 ಕೋಟಿ ಪ್ರಯಾಣಗಳು ಪೂರ್ಣ
✅ ಪ್ರತಿದಿನ ಸುಮಾರು 75 ಲಕ್ಷ ಮಹಿಳೆಯರು ಪ್ರಯಾಣ
✅ ಸುಮಾರು 42 ಲಕ್ಷ ಮಹಿಳೆಯರಿಗೆ ಲಾಭ
ಇದು ಕೇವಲ ಉಚಿತ ಬಸ್ ಟಿಕೆಟ್ ಅಲ್ಲ…
👉 ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ
👉 ಕೆಲಸ & ಶಿಕ್ಷಣಕ್ಕೆ ಸಹಾಯ
👉 ತಿಂಗಳಿಗೆ ₹1000 – ₹1500 ಉಳಿತಾಯ
ಸ್ಮಾರ್ಟ್ ಕಾರ್ಡ್ ಯಾಕೆ ಕಡ್ಡಾಯ ಮಾಡುತ್ತಿದ್ದಾರೆ?
✔️ ನಿಖರ ಲೆಕ್ಕಾಚಾರ
✔️ ದುರುಪಯೋಗ ತಡೆ
✔️ ಉತ್ತಮ ಬಸ್ ಸೇವೆ ಯೋಜನೆ
ಇದರ ಜೊತೆಗೆ ಸರ್ಕಾರ National Common Mobility Card (NCMC) ಕೂಡ ಜಾರಿಗೆ ತರ್ತಿದೆ.
👉 ಒಂದೇ ಕಾರ್ಡ್ ಮೂಲಕ ಬಸ್, ಮೆಟ್ರೋ, ಟ್ರೈನ್ ಬಳಸಬಹುದಾಗಿದೆ
ಯಾರು ಅರ್ಹರು?
✅ ಕರ್ನಾಟಕದ ಮಹಿಳೆಯರು
✅ 6 – 12 ವರ್ಷದ ಹುಡುಗಿಯರು
✅ ಟ್ರಾನ್ಸ್ಜೆಂಡರ್ ಸಮುದಾಯ
❌ ಸಾರಿಗೆ ನಿಗಮದ ಮಹಿಳಾ ಸಿಬ್ಬಂದಿಗೆ ಅನ್ವಯಿಸುವುದಿಲ್ಲ
ಯಾವ ಬಸ್‌ಗಳಲ್ಲಿ ಉಚಿತ?
✔️ ಸಾಮಾನ್ಯ ಬಸ್
✔️ ನಗರ ಸಾರಿಗೆ
✔️ ಎಕ್ಸ್‌ಪ್ರೆಸ್ ಬಸ್
❌ AC / ಪ್ರೀಮಿಯಂ ಸೇವೆಗಳು ಲಭ್ಯವಿಲ್ಲ
ಯೋಜನೆ ಲಭ್ಯವಿರುವ ಸಾರಿಗೆ ನಿಗಮಗಳು
👉 KSRTC
👉 BMTC
👉 NWKRTC
👉 KKRTC
ಸ್ಮಾರ್ಟ್ ಕಾರ್ಡ್ ಹೇಗೆ ಪಡೆಯುವುದು?
👉 Seva Sindhu Portal ನಲ್ಲಿ ಅರ್ಜಿ ಸಲ್ಲಿಸಿ
👉 ಅಥವಾ ಇಲ್ಲಿ ನಿಮ್ಮ ಮೊಬೈಲ್ ನಿಂದಲೇ ಡೌನ್ಲೋಡ್ ಮಾಡಿ
