Canara Bank Rural Self Employment Training Institute | ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಕುಮಟಾ ಇವರು ಉಚಿತವಾಗಿ ಪಂಪ್ ಸೆಟ್ ಹಾಗೂ ಗೃಹ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ ಲೇಖನದಲ್ಲಿ ತರಬೇತಿಯ ವಿಧಾನ, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆಗಳು ಹಾಗೂ ಇದರ ಉಪಯೋಗಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.

Canara Bank Rural Self Employment Training Institute

ತರಬೇತಿಯ ಉದ್ದೇಶ:

ಗ್ರಾಮೀಣ ಯುವಕರಿಗೆ ತಾಂತ್ರಿಕ ಕೌಶಲ್ಯವನ್ನು ಕಲಿಸಿ, ಅವರಲ್ಲಿ ಸ್ವ ಉದ್ಯಮ ಪ್ರೇರಣೆಯನ್ನು ಬೆಳೆಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ.

ತರಬೇತಿಯ ವಿಷಯಗಳು:

  • ಪಂಪ್ ಸೆಟ್ ರಿಪೇರಿ (ಡೀಸೆಲ್/ಎಲೆಕ್ಟ್ರಿಕ್)
  • ಗೃಹ ಉಪಕರಣಗಳ ರಿಪೇರಿ (ಮಿಕ್ಸರ್, ಗ್ರೈಂಡರ್, ಫ್ಯಾನ್)
  • ಮನೆವೈರಿಂಗ್ ಹಾಗೂ ಇತರ ಎಲೆಕ್ಟ್ರಿಕಲ್ ಕೌಶಲ್ಯಗಳು
  • ಉದ್ಯಮಶೀಲತೆ ತರಬೇತಿ, ಮಾರುಕಟ್ಟೆ ಅಧ್ಯಯನ, ಮಾರಾಟ ತಂತ್ರಗಳು
  • ಯಶಸ್ವಿ ಉದ್ಯಮಿಗಳಿಂದ ಅನುಭವ ಹಂಚಿಕೆ
  • ಬ್ಯಾಂಕ್ ಸಾಲ, ಯೋಜನೆ ರೂಪಿಕೆ, ಸಾಫ್ಟ್ ಸ್ಕಿಲ್ಸ್ ಹಾಗೂ ಯೋಗ ತರಬೇತಿ

ತರಬೇತಿ ಅವಧಿ:

  • ಆರಂಭ ದಿನಾಂಕ: 20 ಜೂನ್ 2025
  • ಅಂತ್ಯ ದಿನಾಂಕ: 19 ಜುಲೈ 2025
  • ಒಟ್ಟು ಅವಧಿ: 30 ದಿನಗಳು

ವಸತಿ ಹಾಗೂ ಊಟ:

ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯಾವುದೇ ಶುಲ್ಕವಿಲ್ಲ – ಸಂಪೂರ್ಣ ಉಚಿತ ತರಬೇತಿಯಾಗಿದೆ.

ಅರ್ಹತೆಗಳು:

  • ಅಭ್ಯರ್ಥಿ ಕರ್ನಾಟಕ ನಿವಾಸಿ ಆಗಿರಬೇಕು
  • ವಯಸ್ಸು: 18 ರಿಂದ 45 ವರ್ಷ
  • ಕನ್ನಡ ಓದಲು ಮತ್ತು ಬರೆಯಲು ಬಲ್ಲಿರಬೇಕು
  • BPL ಕಾರ್ಡ್ ಹೊಂದಿರುವವರಿಗೆ ಆದ್ಯತೆ
  • ಸ್ವ ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವವರು

ಅರ್ಜಿಗೆ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್ ನಕಲು
  • ಬ್ಯಾಂಕ್ ಪಾಸ್ ಬುಕ್ ಪ್ರತಿಯು
  • ರೇಷನ್ ಕಾರ್ಡ್ ನಕಲು
  • 2 ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಕ್ರಿಯ ಮೊಬೈಲ್ ಸಂಖ್ಯೆ

ಅರ್ಜಿಯ ವಿಧಾನ (2 ಮಾರ್ಗಗಳಲ್ಲಿ):

1. ಆನ್ಲೈನ್ ಮೂಲಕ:

  • ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಅರ್ಜಿ ಲಿಂಕ್ ಪಡೆದು ಭರ್ತಿ ಮಾಡಬಹುದು
  • ಅರ್ಜಿಯನ್ನು ಪೂರೈಸಿ “Submit” ಕ್ಲಿಕ್ ಮಾಡಿ

2. ನೇರೆ ಹಾಜರಾಗಿ ಅರ್ಜಿ ಸಲ್ಲಿಕೆ:

  • ಎಲ್ಲ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ನೇರವಾಗಿ ಹೋಗಿ ಅರ್ಜಿ ಸಲ್ಲಿಸಬಹುದು:

ತರಬೇತಿ ಕೇಂದ್ರ ವಿಳಾಸ:
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI)
ಇಂಡಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ,
ಕುಮಟಾ, ಉತ್ತರ ಕನ್ನಡ ಜಿಲ್ಲೆ – 581343

ಸಂಪರ್ಕ ಸಂಖ್ಯೆಗಳು:
94498 60007, 95382 81989, 99167 83825, 88804 46120

ಉಚಿತ ತರಬೇತಿಗೆ ಅರ್ಜಿ

ಸೂಚನೆ: ಆಸಕ್ತರು ಮೊದಲೇ ಅರ್ಜಿ ಸಲ್ಲಿಸಿ ಅವಕಾಶವನ್ನು ಬಳಸಿಕೊಳ್ಳಿ. ಸ್ಥಳಸೀಮಿತವಾಗಿದೆ.

ಅಧಿಕೃತ ವೆಬ್ಸೈಟ್

Leave a Reply