Electric Bike (Scooty) PM e-Drive Scheme 2026: ಪೆಟ್ರೋಲ್ ಬೆಲೆ ಏರಿಕೆ ನಡುವೆ ಕೇಂದ್ರ ಸರ್ಕಾರದಿಂದ ಜನರಿಗೆ ಎಲೆಕ್ಟ್ರಿಕ್‌ ಬೈಕ್‌ ಗೆ ಮತ್ತೆ ಹೆಚ್ಚಿನ ಸಬ್ಸಿಡಿ ಈಗಲೆ ಅಪ್ಲೆ ಮಾಡಿ

ಪೆಟ್ರೋಲ್ ಮತ್ತು ಡೀಸೆಲ್ ದರಗಳು ದಿನದಿಂದ ದಿನಕ್ಕೆ ಏರುತ್ತಿರುವ ಕಾರಣ ಸಾಮಾನ್ಯ ಜನರ ಖರ್ಚು ಹೆಚ್ಚಾಗಿದೆ. ಈ ನಡುವೆಯೇ ಕೇಂದ್ರ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ವಿದ್ಯುತ್ ದ್ವಿಚಕ್ರ ವಾಹನಗಳ ಖರೀದಿಗೆ ಮತ್ತೆ ಹೆಚ್ಚಿನ ಸಬ್ಸಿಡಿ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

Electric Bike

PM e-Drive ಯೋಜನೆಯಡಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗದ ಕಾರಣ ಯೋಜನೆಯನ್ನು ಜುಲೈವರೆಗೆ ವಿಸ್ತರಿಸಲಾಗಿದೆ. ಇದೀಗ ಸರ್ಕಾರ ಹೊಸ ಬಜೆಟ್ ಮೀಸಲಿಟ್ಟು ಸಬ್ಸಿಡಿಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಸಬ್ಸಿಡಿ ಹೆಚ್ಚಾದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಮಧ್ಯಮ ವರ್ಗದ ಜನರೂ ಸುಲಭವಾಗಿ EV ವಾಹನಗಳನ್ನು ಖರೀದಿಸಬಹುದು. ಜೊತೆಗೆ ಪೆಟ್ರೋಲ್ ವೆಚ್ಚದ ಭಾರವೂ ಕಡಿಮೆಯಾಗಲಿದೆ.

ಈ ಕ್ರಮದ ಮುಖ್ಯ ಉದ್ದೇಶ ದೇಶದ ತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು. ವಿದ್ಯುತ್ ವಾಹನಗಳ ಬಳಕೆ ಹೆಚ್ಚಾದರೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಇಳಿಕೆಯಾಗುತ್ತದೆ. ಇದರಿಂದ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಜನರ ತಿಂಗಳ ಖರ್ಚಿನಲ್ಲೂ ಉಳಿತಾಯ ಸಾಧ್ಯ.

ವಿದ್ಯುತ್ ವಾಹನ ಕಂಪನಿಗಳಿಗೂ ಇದು ದೊಡ್ಡ ಉತ್ತೇಜನವಾಗಲಿದೆ. ಹೊಸ ಸಬ್ಸಿಡಿ ಜಾರಿಯಾದರೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳ ಮಾರಾಟ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ಇದೆ.

Leave a Reply